ಹಾಸನ: ಹಾಸನದ ಅದಿದೇವತೆ ಹಾಸನಾಂಬೆ ದರ್ಶನಕ್ಕೆ ಜನಸಾಗರವೇ ಹರಿದು ಬರುತ್ತಿದೆ. ಈ ಮಧ್ಯೆ ಮುಸ್ಲಿಂ ಕುಟುಂಬವೊಂದು ದೂರದೂರಿನಿಂದ ಬಂದು ಹಾಸನಾಂಬೆ ದರ್ಶನ ಪಡೆಯುವ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ.
ಗೌಸ್ ಮೋಹಿಯುದ್ದೀನ್ ಹಾಗೂ ಮಗಳು ಹಜೀರ ವಿಜಯಪುರದಿಂದ ಹಾಸನಕ್ಕೆ ಆಗಮಿಸಿ ಹಾಸನಾಂಬೆ ದೇವಿಯ ದರ್ಶನ ಪಡೆದಿದ್ದಾರೆ. ಕೆಪಿಟಿಸಿ ಎಲ್ ಉದ್ಯೋಗಿಯಾಗಿರುವ ಗೌಸ್ ಮೊಹಿಯುದ್ದೀನ್ ಹಾಸನಾಂಬೆ ದರ್ಶನ ಪಡೆದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿದೆ. ನಮ್ಮಲ್ಲಿಯೂ ಆ ನಂಬಿಕೆಯಿರುವುದರಿಂದ ದೇವಿಯ ದರ್ಶನ ಪಡೆದಿದ್ದೇವೆ ಎಂದಿದ್ದಾರೆ.
ದೇವರ ದರ್ಶನ ಪಡೆದ ಗೌಸ್ ಅವರ ಮಗಳು ಹಜಿರಾ, ದೇವನೊಬ್ಬ ನಾಮ ಹಲವು ಎಂದು 12ನೇ ಶತಮಾನದಲ್ಲಿ ಬಸವಣ್ಣನವರು ಹೆಳಿದ್ದರು. ನಮಗೆ ಯಾವ ದೇವರ ಬಗ್ಗೆ ಭೇದಭಾವವಿಲ್ಲ. ಇದೇ ಮೊದಲ ಬಾರಿಗೆ ನಾವು ಹಾಸನಾಂಬೆ ದರ್ಶನಕ್ಕೆ ಬಂದಿದ್ದೇವೆ. ಸಹೋದ್ಯೋಗಿಗಳಿಂದ ನಮಗೆ ಹಾಸನಾಂಬೆ ಉತ್ಸವದ ಬಗ್ಗೆ ಗೊತ್ತಾಯಿತು ಎಂದು ತಿಳಿಸಿದ್ದಾರೆ.