ಮೈಸೂರು: ರಾಷ್ಟ್ರೀಯ ಹೆದ್ದಾರಿ 373ರಲ್ಲಿ ಪುಂಡರು ಬೈಕ್ ವ್ಹೀಲಿಂಗ್ ಮಾಡಿ ಹುಚ್ಚಾಟ ಮೆರೆದಿದ್ದು, ವಾಹನ ಸವಾರರಿಗೆ ರಸ್ತೆ ಬಿಡದೇ ತೊಂದರೆ ನೀಡಿರುವ ಘಟನೆ ನಡೆದಿದೆ.
ಹಾಸನ-ಮೈಸೂರು ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಒಂದು ಬೈಕ್ ನಲ್ಲಿ 2-3 ಜನರು ಕುಳಿತುಕೊಂಡು ನಡುರಸ್ತೆಯಲ್ಲಿ ವ್ಹೀಲಿಂಗ್ ಮಾಡಿದ್ದಾರೆ. ಮತ್ತೊಂದೆಡೆ ನಾಲ್ಕೈದು ಬೈಕ್ ಗಳಲ್ಲಿ ಬಂದ ಯುವಕರ ಗುಂಪು ವ್ಹೀಲಿಂಗ್ ಮಾಡುತ್ತಾ ಬೇರೆ ವಾಹನಗಳಿಗೆ ರಸ್ತೆ ಬಿಡದೇ ಕಾಟ ಕೊಟ್ಟಿದ್ದಾರೆ.
ಯುವಕರ ವ್ಹೀಲಿಂಗ್ ಪುಮ್ದಾಟವನ್ನು ಕಾರಿನಲ್ಲಿ ತೆರಳುತ್ತಿದ್ದ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಹಾಸನ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿ ದಿನ ವ್ಹೀಲಿಂಗ್ ಪುಂದರು ಈ ರೀತಿ ಸಮಸ್ಯೆಯುಮ್ಟು ಮಾಡುತ್ತಿದ್ದು, ಇತರ ವಾಹನ ಸವಾರರು ಜೀವ ಭಯದಲ್ಲಿ ತೆರಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.