ಬೇಲೂರು: ಸರ್ಕಾರಿ ಬಾಲಕರ ಹಾಸ್ಟೇಲ್ ನಲ್ಲಿ ವಿದ್ಯಾರ್ಥಿಗಳು ಧೂಮಪಾನ, ಡ್ರಗ್ಸ್, ಮದ್ಯಪಾನ ಮಾಡಿ ನಶೆಯಲ್ಲಿ ತೇಲುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸ್ಟೇಲ್ ವಾರ್ಡನ್ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಅಮಾನತು ಮಾಡಲಾಗಿದೆ.
ಚಂದ್ರಶೇಖರ್ ಅಮಾನತುಗೊಂಡಿರುವ ಬಿಕ್ಕೋಡು ಸರ್ಕಾರಿ ಹಾಸ್ಟೇಲ್ ವಾರ್ಡನ್. ಚಂದ್ರಶೇಖರ್ ನನ್ನು ಅಮಾನತುಗೊಳಿಸಿ ಹಾಸನ ಜಿಲ್ಲಾ ಪಂಚಾಯತ್ ಸಿಇಒ ಪೂರ್ಣಿಮಾ ಆದೇಶ ಹೊರಡಿಸಿದ್ದಾರೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಬಿಕ್ಕೋಡು ಸರ್ಕಾರಿ ಪದವಿಪೂರ್ವ ಬಾಲಕರ ಹಾಸ್ಟೇಲ್ ನಲ್ಲಿ ಡ್ರಗ್ಸ್, ಧೂಮಪಾನ, ಮದ್ಯಪಾನ ಮಾಡುತ್ತ ಮಕ್ಕಳು ಅಮಲಿನಲ್ಲಿ ತೇಲುತ್ತಿರುವ ಪ್ರಕರನದ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ವಾರ್ಡನ್ ಅಮಾನತು ಮಾಡುವಂತೆ ಸಿಇಒ ಅವರಿಗೆ ವರದಿ ನೀಡಿತ್ತು.
ಈ ಹಿನ್ನೆಲೆಯಲ್ಲಿ ವಾರ್ಡನ್ ಚಂದ್ರಶೇಖರ್ ನನ್ನು ಕರ್ತವ್ಯಲೋಪ, ನಿರ್ಲಕ್ಷ್ಯ ಆರೋಪದಲ್ಲಿ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.