ವಯಸ್ಸು ಹೆಚ್ಚಾದಂತೆ ಕೂದಲು ಬೆಳ್ಳಗಾಗುತ್ತದೆ. ಚರ್ಮ ಸುಕ್ಕುಗಟ್ಟಲು ಶುರುವಾಗುತ್ತದೆ. ಇದಕ್ಕೆ ಆತಂಕ ಪಡಬೇಕಾಗಿಲ್ಲ. ಮಾಲಿನ್ಯ ಹಾಗೂ ಜೀವನ ಶೈಲಿಯಲ್ಲಾಗುತ್ತಿರುವ ಬದಲಾವಣೆಯಿಂದ ವಯಸ್ಸಿಗೆ ಮೊದಲೇ ಕೂದಲು ಬೆಳ್ಳಗಾಗ್ತಿದೆ.
ಇತ್ತೀಚಿನ ದಿನಗಳಲ್ಲಿ ಬಹುತೇಕರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸಣ್ಣ ವಯಸ್ಸಿನಲ್ಲಿಯೇ ಬಿಳಿ ಕೂದಲನ್ನು ಮುಚ್ಚಿಡಲು ಬಣ್ಣ ಬಳಿದುಕೊಳ್ಳುವುದು ಅನಿವಾರ್ಯವಾಗ್ತಿದೆ.
ಸಮಯಕ್ಕೂ ಮುನ್ನ ಕೂದಲು ಬೆಳ್ಳಗಾಗಲು ಒಂದೇ ಕಾರಣವಿಲ್ಲ. ಬೇರೆ ಬೇರೆ ಕಾರಣಗಳಿಗೆ ಕೂದಲು ಬೆಳ್ಳಗಾಗುತ್ತದೆ.
ಆಹಾರದಲ್ಲಿ ಬದಲಾವಣೆ ಇಲ್ಲವೆ ದೇಹದಲ್ಲಿ ವಿಟಮಿನ್ ಬಿ, ಕಬ್ಬಿಣ, ತಾಮ್ರ, ಆಯೋಡಿನ್ ಪ್ರಮಾಣ ಕಡಿಮೆಯಿದ್ದರೆ ಕೂದಲು ಬೆಳ್ಳಗಾಗಲು ಶುರುವಾಗುತ್ತದೆ.
ಕೂದಲು ಬಿಳಿಯಾಗಲು ಒತ್ತಡ ಕೂಡ ಒಂದು ಕಾರಣ. ಆತಂಕ, ಭಯ, ಸದಾ ಒತ್ತಡದಲ್ಲಿರುವ ಜನರಿಗೆ ಕೂದಲು ಬೇಗ ಬೆಳ್ಳಗಾಗುತ್ತದೆ. ಕೂದಲನ್ನು ಸಮಯಕ್ಕೆ ಸರಿಯಾಗಿ ಸ್ವಚ್ಛ ಮಾಡಿಕೊಳ್ಳದೆ ಇರುವುದು ಕೂಡ ಇದಕ್ಕೆ ಕಾರಣವಾಗುತ್ತದೆ. ಮಾಲಿನ್ಯ, ಶಾಂಪೂ, ರಾಸಾಯನಿಕ ವಸ್ತುಗಳ ಬಳಕೆ ಕೂಡ ಇದಕ್ಕೆ ಕಾರಣವಾಗುತ್ತದೆ.
ಕೂದಲು ಸಮಯಕ್ಕಿಂತ ಮೊದಲು ಬೆಳ್ಳಗಾಗಲು ಶುರುವಾದ್ರೆ ಮೊದಲು ಸಮತೋಲನ ಹಾಗೂ ಆರೋಗ್ಯಕರ ಡಯಟ್ ಶುರು ಮಾಡಿ. ವಿಟಮಿನ್ ಬಿ ಇರುವ ಮೊಸರು, ಹಸಿರು ತರಕಾರಿ, ಬಾಳೆಹಣ್ಣನ್ನು ಡಯಟ್ ನಲ್ಲಿ ಸೇರಿಸಿ. ರಾಸಾಯನಿಕ ಎಣ್ಣೆ ಬದಲು ತೆಂಗಿನ ಎಣ್ಣೆ, ಸಾಸಿವೆ ಎಣ್ಣೆಯನ್ನು ತಲೆಗೆ ಹಚ್ಚಿ.