ಬೆಂಗಳೂರು : ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ ಹಣ ಬಾರದೇ ಇರುವವರಿಗೆ ಸರಿಯಾದ ಮಾಹಿತಿ ಸಲ್ಲಿಸಿದ್ರೆ ಅವರ ಖಾತೆಗೆ ಹಣ ಜಮಾ ಮಾಡಲಾಗುವುದು. ಬ್ಯಾಂಕ್ ಖಾತೆ ಮಾಹಿತಿ ತಪ್ಪಾಗಿದ್ರೆ, ಸಮಸ್ಯೆ ಬಗೆಹರಿಸಿ ಕಾರ್ಡ್ ದಾರರಿಗೆ ಹಣ ಜಮೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಆಹಾರ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಒಟ್ಟು 1.28 ಕೋಟಿ ಬಿಪಿಎಲ್ ಕುಟುಂಬಗಳಿವೆ. 1.10 ಕಾರ್ಡ್ ದಾರರಿಗೆ 5 ಕೆಜಿ ಪಡಿತರಕ್ಕೆ ತಗಲುವ ಹಣವನ್ನು ಜಮೆ ಮಾಡಲಾಗುತ್ತಿದೆ. ಇನ್ನುಳಿದ 18 ಲಕ್ಷ ಕಾರ್ಡ್ ದಾರರಲ್ಲಿ 5 ಲಕ್ಷ ಮಂದಿ ಮೃತಪಟ್ಟಿದ್ದಾರೆ. 5 ಲಕ್ಷ ಕಾರ್ಡ್ ಗಳಿಗೆ ಯಜಮಾನರಿಲ್ಲ. ಉಳಿದ 8 ಲಕ್ಷಕ್ಕೆ ಮುಖ್ಯಸ್ಥರು, ಬ್ಯಾಂಕ್ ಖಾತೆ ಮಾಹಿತಿ ತಪ್ಪಾಗಿದೆ. ಈ ಸಮಸ್ಯೆ ಬಗೆಹರಿಸಿ ಕಾರ್ಡ್ ದಾರರಿಗೆ ಶೀಘ್ರವೇ ಖಾತೆಗೆ ಹಣ ಬಿಡುಗಡೆ ಮಾಡಲು ಆಹಾರ ಇಲಾಖೆ ಸಿದ್ಧತೆ ನಡೆಸಿದೆ.
ಮನೆಯ ಯಜಮಾನ ಹೆಸರಿನಲ್ಲಿ ಬ್ಯಾಂಕ್ ಖಾತೆ ಇಲ್ಲದೆ ಇರುವುದರಿಂದ ಅನ್ನಭಾಗ್ಯ ಹಣ ಖಾತೆಗೆ ಜಮೆ ಆಗಿಲ್ಲ. ಪ್ರಮುಖವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಜನ ಬ್ಯಾಂಕ್ ಖಾತೆ ಹೊಂದಿಲ್ಲ ಜೊತೆಗೆ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಆಗಿಲ್ಲ ಈ ಕೆಲಸ ಮಾಡಿದ್ರೆ ತಕ್ಷಣವೇ ಎಲ್ಲಾ ಕಂತಿನ ಹಣ ಖಾತೆಗೆ ಜಮೆ ಆಗಲಿದೆ.