ಕ್ಲಬ್ ಹೌಸ್ ಪ್ರಾರಂಭಿಸಿ ಸುಮಾರು ಒಂದೂವರೆ ವರ್ಷ ಆಗಿದೆ. ಈಗ ಸ್ವಲ್ಪ ತಿಂಗಳ ಹಿಂದೆ, ಎಲ್ಲಿ ಹೋದರೂ ಕ್ಲಬ್ ಹೌಸ್ ದೇ ಚರ್ಚೆ. “ಇನ್ನೂ ಕೂಡ ಕ್ಲಬ್ ಹೌಸ್ ಗೆ ಸೇರಿಲ್ವಾ” ಅಂತ ಪ್ರಶ್ನೆ ಕೇಳುತ್ತಿದ್ದರು. ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು “ಇನ್ನೂ ಕೂಡ ಕ್ಲಬ್ ಹೌಸ್ ಉಪಯೋಗಿಸುತ್ತಾರಾ ?” ಅಂತ ಪ್ರಶ್ನೆ ಕೇಳಲಾರಂಭಿಸಿದ್ದಾರೆ.
ಕ್ಲಬ್ ಹೌಸ್, ಏಪ್ರಿಲ್ 2020 ರಲ್ಲಿ ಜಗತ್ತಿನಾದ್ಯಂತ ಬಿಡುಗಡೆ ಮಾಡಲಾದ ಧ್ವನಿಯಾಧಾರಿತ ಸಾಮಾಜಿಕ ಆಪ್. ಇದರ ಮಾರುಕಟ್ಟೆ ಬೆಲೆ, ನಾಲ್ಕು ಬಿಲಿಯನ್ ಡಾಲರ್. ಭಾರತದಲ್ಲಿ ಅತ್ಯಂತ ಹೆಚ್ಚಿನ ಬಳಕೆದಾರರನ್ನು ಹೊಂದಿದ್ದ ಕ್ಲಬ್ ಹೌಸ್, ಈಗೀಗ ಇದರ ಬಳಸುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಮಾಹಿತಿ ಇದೆ.
ಬಿಜೆಪಿ ಹೈಕಮಾಂಡ್ ಅಚ್ಚರಿ ನಿರ್ಧಾರ: ಘಟಾನುಘಟಿ ನಾಯಕರಿಗೇ ಬಿಗ್ ಶಾಕ್; ತಲೆಕೆಳಗಾದ ರಾಜಕೀಯ ಲೆಕ್ಕಾಚಾರ
ಈ ವರ್ಷ ಜೂನ್ ತಿಂಗಳಲ್ಲಿ ಜಗತ್ತಿನಾದ್ಯಂತ ಸುಮಾರು 5.9 ಮಿಲಿಯನ್ ಆಪ್ ಡೌನ್ ಲೋಡ್ ಆಗಿದ್ದು, ಜುಲೈ ತಿಂಗಳಲ್ಲಿ ಸುಮಾರು 1.4 ಮಿಲಿಯನ್ ಬಳಕೆದಾರರ ಸಂಖ್ಯೆ ಕಡಿಮೆಯಾಗಿತ್ತು. ಆಗಸ್ಟ್ ತಿಂಗಳಲ್ಲಿ ಮತ್ತಷ್ಟು ಕಡಿಮೆಯಾಗಿತ್ತು. ಭಾರತದಲ್ಲಿ ಆಗಸ್ಟ್ ತಿಂಗಳಲ್ಲಿ 1.26 ಮಿಲಿಯನ್ ಗ್ರಾಹಕರಿದ್ದು, ಇದು ಜುಲೈ ತಿಂಗಳಿಗೆಗಿಂತ ಶೇ 46.75 ಕಡಿಮೆಯಾಗಿದೆ ಎಂದು ಸಿಮಿಲರ್ ವೆಬ್ ಅಂಕಿ ಅಂಶ ಹೇಳುತ್ತದೆ. ಬದಲಾವಣೆ ಜಗದ ನಿಯಮ. ಈ ಹಿಂದೆ ಇಂತಹ ಅನೇಕ ಆಪ್‌ಗಳು ಜನಮಾನಸದಲ್ಲಿ ನೆಲೆನಿಂತು ಕಾಲಕ್ರಮೇಣ ನಶಿಸಿಹೋಗಿದೆ.