ಚಳಿಗಾಲದಲ್ಲಿ ಅಸ್ತಮಾ ಸಮಸ್ಯೆ ಮಕ್ಕಳನ್ನು ಮಾತ್ರವಲ್ಲ ಮನೆಯ ಹಿರಿಯರನ್ನೂ ಕಂಗಾಲು ಮಾಡಿ ಬಿಡುತ್ತದೆ.
ಇದರ ನಿವಾರಣೆಗೆ ಹತ್ತು ಹಲವು ಮನೆಮದ್ದುಗಳಿವೆ. ಇದರಿಂದ ಸಂಪೂರ್ಣ ಸಮಸ್ಯೆಯೇ ನಿವಾರಣೆಯಾಗದಿದ್ದರೂ ಅಸ್ತಮಾದ ಲಕ್ಷಣಗಳು ಕಡಿಮೆಯಾಗುತ್ತವೆ.
ಒಂದು ತಿಂಗಳ ಈ ಔಷಧವನ್ನು ನೀವು ವಾರಕ್ಕೊಂದು ಸಲ ಮಾಡಿ ಕುಡಿಯಬಹುದು. ಮೊದಲ ವಾರ ಕರಿಮೆಣಸಿನ ಪುಡಿಯನ್ನು ನೀರಿನಲ್ಲಿ ಕುದಿಸಿ ಜೇನುತುಪ್ಪ ಬೆರೆಸಿ ಕುಡಿಯಿರಿ. ಇದರಿಂದ ಕಟ್ಟಿದ ಕಫವೆಲ್ಲ ನೀರಾಗುತ್ತದೆ.
ಎರಡನೇ ವಾರದಲ್ಲಿ ಶುಂಠಿ ಜಜ್ಜಿ ಹಾಕಿದ ಕಷಾಯ ಮಾಡಿ ಕುಡಿಯಿರಿ. ಇದು ಖಾರ ಎನಿಸಿದರೆ ತುಂಡು ಬೆಲ್ಲ ಸೇರಿಸಿ ಕುದಿಸಿ. ಇದಕ್ಕೆ ಚಿಟಿಕೆ ಅರಶಿನ ಪುಡಿ ಬೆರೆಸಿ ಕುಡಿಯುವುದು ಒಳ್ಳೆಯದು. ಮೂರನೆಯ ವಾರದಲ್ಲಿ ಹಸಿ ಅರಶಿನ ತೇದು ಅಥವಾ ತುರಿದು ನೀರಿನಲ್ಲಿ ಕುದಿಸಿ ಕುಡಿಯಿರಿ.
ಹೊಂಗೆ ಮರದ ಸಿಪ್ಪೆಯ ಕಷಾಯ ತಯಾರಿಸಿ ಕುಡಿದರೂ ಅಸ್ತಮಾದ ಸಮಸ್ಯೆಗಳು ದೂರವಾಗುತ್ತವೆ. ಮೂರು ತಿಂಗಳ ತನಕ ಇದನ್ನೇ ಮುಂದುವರೆಸಿದರೆ ಅತ್ಯುತ್ತಮ ಪರಿಣಾಮ ನಿಮ್ಮದಾಗುತ್ತದೆ. ಅಸ್ತಮಾದ ಲಕ್ಷಣಗಳು ಬಹುತೇಕ ದೂರವಾಗುತ್ತದೆ.