ಹರಿಯಾಣದ ರೇವಾರಿ ಜಿಲ್ಲೆಯ ಬಲಿಯಾರ್ ಖುರ್ದ್ ಗ್ರಾಮದಲ್ಲಿ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳ ಮೇಲೆ ಪಿಟ್ ಬುಲ್ ನಾಯಿ ದಾಳಿ ಮಾಡಿದೆ.
ಆಸ್ಪತ್ರೆಗೆ ದಾಖಲಾಗಿರುವ ಮಹಿಳೆಯ ಕಾಲು, ಕೈ ಮತ್ತು ತಲೆಗೆ 50 ಹೊಲಿಗೆ ಹಾಕಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಅಲ್ಪಸ್ವಲ್ಪ ಗಾಯಗಳಾಗಿದ್ದ ಅವರ ಇಬ್ಬರು ಮಕ್ಕಳನ್ನು ಶನಿವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಹೊರಗೆ ಹೋಗಿದ್ದ ಗ್ರಾಮದ ಮಾಜಿ ಸರಪಂಚ್ ಸೂರಜ್ ಎಂಬವರು ತಮ್ಮ ಪತ್ನಿ ಹಾಗೂ ಮಕ್ಕಳೊಂದಿಗೆ ಮನೆಗೆ ಬಂದಾಗ ಅವರ ಸಾಕು ನಾಯಿ ಇವರುಗಳ ಮೇಲೆ ದಾಳಿ ಮಾಡಿದೆ.
ಅವರ ಕೂಗು ಕೇಳಿದ ಅಕ್ಕಪಕ್ಕದವರು ನಾಯಿಯಿಂದ ಮಹಿಳೆ ಮತ್ತು ಮಕ್ಕಳನ್ನು ರಕ್ಷಿಸಿದ್ದಾರೆ. ಬಳಿಕ ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.