ತನ್ನ ವಿರುದ್ಧ ಅತ್ಯಾಚಾರದ ಆರೋಪದ ಮೇಲೆ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಲಕ್ಷಾಂತರ ರೂಪಾಯಿಗಳನ್ನು ಕೀಳಲು ಮಹಿಳೆಯೊಬ್ಬಳು ಬ್ಲಾಕ್‌ಮೇಲ್ ಮಾಡಿದ್ದಾಳೆ ಎಂದು ಹರಿಯಾಣ ಪೊಲೀಸ್ ಪೇದೆಯೊಬ್ಬರು ಆರೋಪಿಸಿದ್ದಾರೆ.
ರಾಜ್ಯದ ಹಿಸ್ಸಾರ್ ಜಿಲ್ಲೆಯ ಮಿರ್ಚ್‌ಪುರ ಗ್ರಾಮದ ಮಣಿಂ ಸರೋಹಾ ಫರೀದಾಬಾದ್‌ನ ಸೂರಜ್‌ಕುಂಡ್ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯದಲ್ಲಿದ್ದಾರೆ. 40 ವರ್ಷದ ಮಹಿಳೆಯೊಬ್ಬರು ಸುಳ್ಳು ಅತ್ಯಾಚಾರದ ಕೇಸ್ ಹಾಕುವುದಾಗಿ ಬ್ಲಾಕ್ ಮೇಲೆ ಮಾಡಿ ತಮ್ಮಿಂದ ದುಡ್ಡು ಕಿತ್ತಿರುವುದಾಗಿ ಈತ ಆರೋಪಿಸಿದ್ದಾರೆ.
ಪೊಲೀಸ್ ಪಡೆಗೆ ಸೇರಲು ತಯಾರಿ ನಡೆಸಲು 2019ರಲ್ಲಿ ಆಗಮಿಸಿದ್ದ ಸರೋಹಾ, ಇಲ್ಲಿನ ಗಣೌರ್‌ನಲ್ಲಿರುವ ತನ್ನ ಸಂಬಂಧಿಯೊಬ್ಬರ ಮನೆಯಲ್ಲಿದ್ದರು. ಈ ವೇಳೆ ಆಪಾದಿತ ಮಹಿಳೆಯ ಸಂಪರ್ಕಕ್ಕೆ ಸರೋಹಾ ಬಂದಿದ್ದಾರೆ. ಪೊಲೀಸ್ ಪಡೆಗೆ ನೇಮಕಗೊಂಡ ಸರೋಹಾನನ್ನು ಸುಳ್ಳು ಕೇಸಿನ ಬೆದರಿಕೆಯೊಡ್ಡಿ ಆತನಿಂದ ಸುಲಿಗೆ ಮಾಡಲು ಆಪಾದಿತೆ ಮುಂದಾಗಿದ್ದಾಳೆ ಎಂದು ಕೇಸಿನ ವಿವರಗಳಿಂದ ತಿಳಿದುಬಂದಿದೆ.
ತನ್ನ ವಿರುದ್ಧ ಎರಡು ಬಾರಿ ಅತ್ಯಾಚಾರದ ದೂರನ್ನು (2019 ಹಾಗೂ 2021) ಈ ಮಹಿಳೆ ದಾಖಲಿಸಿದ್ದಾಗಿ ತಿಳಿಸಿದ ಪೊಲೀಸ್ ಪೇದೆ, ನಂತರದಲ್ಲಿ ತನ್ನ ದೂರನ್ನು ಹಿಂಪಡೆಯಲು 2.5 ಲಕ್ಷ ರೂಪಾಯಿ ಕಿತ್ತಿದ್ದಾಗಿ ತಿಳಿಸಿದ್ದಾರೆ. ಇದೀಗ ತನಗೆ 20 ಲಕ್ಷ ರೂಪಾಯಿ ಕೊಡಲು ಆಕೆ ಕೇಳುತ್ತಿರುವುದಾಗಿ ಸಂತ್ರಸ್ತರು ತಿಳಿಸಿದ್ದಾರೆ.
ಪೇದೆಯ ದೂರಿನ ಅನ್ವಯ ಇಲ್ಲಿನ ನರ್ನೌಂಡ್ ಪೊಲೀಸ್ ಠಾಣೆಯ ಪೊಲೀಸರು ದೂರು ದಾಖಲಿಸಿದ್ದು, ಆಪಾದಿತೆಯ ವಿರುದ್ಧ ಐಪಿಸಿಯ ಸೆಕ್ಷನ್ 506 (ಅಪರಾಧಿ ನಡವಳಿಕೆ) ಹಾಗೂ 389 (ಸುಲಿಗೆ) ಅಡಿ ಆರೋಪ ಪಟ್ಟಿ ಸಿದ್ಧಪಡಿಸಿದ್ದಾರೆ. ಎಸ್‌ಸಿ/ಎಸ್‌ಟಿ ದೌರ್ಜನ್ಯದ ಆರೋಪದ ಮೇಲೂ ಆಪಾದಿತೆಯ ಮೇಲೆ ಪ್ರಕರಣ ದಾಖಲಾಗಿದೆ.
ನಿಮ್ಮ ಭವಿಷ್ಯದ ಹಣಕಾಸು ಸ್ಥಿತಿಗತಿ ಸುಧಾರಿಸುತ್ತೆ ಈ 5 ಟಿಪ್ಸ್
ಮತ್ತೊಂದು ಘಟನೆಯಲ್ಲಿ, ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಗ್ರಾಮವೊಂದರಲ್ಲಿ ಗನ್ ತೋರಿದ ಅತ್ಯಾಚಾರಿಗಳು 17 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾರೆ. ಬುಧವಾರ ನಡೆದ ಈ ಘಟನೆಯ ಸಂಬಂಧ ಸಂತ್ರಸ್ತೆಯ ತಂದೆ ದೂರು ನೀಡಿದ್ದು, ಸಂಬಂಧಿತ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿಲಾಗಿದ್ದು, ಒಬ್ಬ ಆಪಾದಿತನನ್ನು ಬಂಧಿಸಲಾಗಿದೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ.