alex Certify ಆಸ್ಪತ್ರೆಗೆ ನುಗ್ಗಿ ನವಜಾತ ಶಿಶು ಕಚ್ಚಿಕೊಂಡು ಹೋದ ಶ್ವಾನ; ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಬೆಚ್ಚಿ ಬೀಳಿಸುವ ದೃಶ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ಪತ್ರೆಗೆ ನುಗ್ಗಿ ನವಜಾತ ಶಿಶು ಕಚ್ಚಿಕೊಂಡು ಹೋದ ಶ್ವಾನ; ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಬೆಚ್ಚಿ ಬೀಳಿಸುವ ದೃಶ್ಯ

ಖಾಸಗಿ ಆಸ್ಪತ್ರೆಗೆ ನುಗ್ಗಿದ ಶ್ವಾನವೊಂದು ಕೇವಲ ಎರಡು ದಿನಗಳ ಹಿಂದಷ್ಟೇ ಜನಿಸಿದ್ದ ನವಜಾತ ಶಿಶುವನ್ನು ಬಾಯಲ್ಲಿ ಕಚ್ಚಿಕೊಂಡು ಹೋಗಿರುವ ಆಘಾತಕಾರಿ ಘಟನೆ ಹರಿಯಾಣದ ಪಾಣಿಪತ್ ನಲ್ಲಿ ನಡೆದಿದ್ದು, ತೀವ್ರ ಗಾಯಗಳಿಂದ ಗಂಡು ಮಗು ಈಗ ಮೃತಪಟ್ಟಿದೆ.

ಸೋಮವಾರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ನವಜಾತ ಶಿಶುವನ್ನು ಪಕ್ಕದಲ್ಲಿ ಮಲಗಿಸಿಕೊಂಡು ಅದರ ಅಜ್ಜಿ ಮಲಗಿದ್ದರು. ಈ ವೇಳೆ ಆಸ್ಪತ್ರೆಗೆ ನುಗ್ಗಿರುವ ಶ್ವಾನ ಮಗುವನ್ನು ಬಾಯಲ್ಲಿ ಕಚ್ಚಿಕೊಂಡು ಹೋಗಿದೆ. ಇದು ಯಾರ ಅರಿವಿಗೂ ಬಂದಿಲ್ಲ.

ಆದರೆ ಕೆಲ ಸಮಯದ ಬಳಿಕ ಎಚ್ಚೆತ್ತುಕೊಂಡ ವೇಳೆ ಮಗು ಕಾಣದಿದ್ದಕ್ಕೆ ಆತಂಕದಿಂದ ಹುಡುಕಾಡಿದ್ದಾರೆ. ಕೊನೆಗೆ ಶ್ವಾನ ಮಗುವನ್ನು ಬಾಯಲ್ಲಿ ಕಚ್ಚಿಕೊಂಡಿರುವುದನ್ನು ಕಂಡು ಪ್ರಯಾಸದಿಂದ ಬಿಡಿಸಿಕೊಂಡರಾದರೂ ಯಾವುದೇ ಪ್ರಯೋಜನವಾಗಿಲ್ಲ ಅಷ್ಟರಲ್ಲಾಗಲೇ ಮಗು ಮೃತಪಟ್ಟಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆಸ್ಪತ್ರೆಯ ಸಿಸಿ ಟಿವಿಗಳನ್ನು ಪರಿಶೀಲಿಸಿದ ವೇಳೆ ಮಗುವನ್ನು ಶ್ವಾನ ಕಚ್ಚಿಕೊಂಡು ಹೋಗಿರುವುದು ಕಂಡುಬಂದಿದೆ. ಇದೀಗ ಈ ಕುರಿತು ಕೇಸ್ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...