ಹರ್ಯಾಣದ ಹಿಸಾರ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ತಾಯಿಯನ್ನು ಕತ್ತು ಹಿಸುಕಿ ಸಾಯಿಸಿ, ಆಕೆಯ ದೇಹವನ್ನು ಸೂಟ್‌ಕೇಸ್‌ನಲ್ಲಿ ತುಂಬಿ, ಶವವನ್ನು ವಿಲೇವಾರಿ ಮಾಡಲು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ಗೆ ರೈಲು ಹತ್ತಿದ ಆಘಾತಕಾರಿ ಘಟನೆ ನಡೆದಿದೆ.
ಪೊಲೀಸರ ಪ್ರಕಾರ, ಆರೋಪಿಯು ತನ್ನ ತಾಯಿಯ ಶವವನ್ನು ಪ್ರಯಾಗರಾಜ್‌ನ ಸಂಗಮ್‌ನಲ್ಲಿ ವಿಲೇವಾರಿ ಮಾಡಲು ರೈಲಿನಲ್ಲಿ ಪ್ರಯಾಣಿಸಿದ್ದಾನೆ, ಅಲ್ಲಿ ಅವನನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ವಿವರಗಳನ್ನು ನೀಡಿದ ಅಧಿಕಾರಿಯೊಬ್ಬರು, ಆರೋಪಿಯನ್ನು ಹಿಮಾಂಶು ಎಂದು ಗುರುತಿಸಲಾಗಿದ್ದು, ಡಿಸೆಂಬರ್ 13 ರಂದು ಹರಿಯಾಣದ ಹಿಸಾರ್ ಜಿಲ್ಲೆಯ ತಮ್ಮ ಮನೆಯಲ್ಲಿ ತನ್ನ ತಾಯಿಯನ್ನು ಕೊಂದಿದ್ದಾನೆ ಎಂದು ಹೇಳಲಾಗಿದೆ.
ಹಿಮಾಂಶು ತನ್ನ ತಾಯಿ 42 ವರ್ಷದ ಪ್ರತಿಮಾ ದೇವಿಯಿಂದ 5,000 ರೂ. ಕೇಳಿದ್ದರು, ಆದರೆ ಅವರು ನಿರಾಕರಿಸಿದರು, ತಾಯಿ-ಮಗ ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಯಿತು, ಈ ಸಂದರ್ಭದಲ್ಲಿ ಆರೋಪಿಯು ತನ್ನ ತಾಯಿಯನ್ನು ಕತ್ತು ಹಿಸುಕಿ ಸಾಯಿಸಿದ್ದಾನೆ ಎಂದು ಡಿಸಿಪಿ(ನಗರ) ದೀಪಕ್ ಭುಕರ್ ಹೇಳಿದ್ದಾರೆ.
ಅದೇ ಸಂಜೆ ಹಿಮಾಂಶು ದೇವಿಯ ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿಕೊಂಡು ಪ್ರಯಾಗರಾಜ್‌ಗೆ ರೈಲು ಹತ್ತಿದರು, ಅಲ್ಲಿ ಶವವನ್ನು ಸಂಗಮ್ ನದಿಯಲ್ಲಿ ವಿಲೇವಾರಿ ಮಾಡಲು ಯೋಜಿಸಿದ್ದ. ಆದರೆ, ಪೊಲೀಸರು ಆತನನ್ನು ತಡೆದು ಬಂಧಿಸಿದ್ದಾರೆ ಎಂದರು.
ಶುಕ್ರವಾರ ಬೆಳಗ್ಗೆ ಸಂಗಮ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ದರಗಂಜ್ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಹಿಮಾಂಶು ನದಿಯ ಮುಂಭಾಗದ ಪ್ರದೇಶದಲ್ಲಿ ಸೂಟ್‌ಕೇಸ್ ಹೊತ್ತುಕೊಂಡು ಹೋಗುತ್ತಿರುವುದು ಕಂಡು ಬಂದಿದೆ. ಪರಿಶೀಲಿಸಿದಾಗ ಸೂಟ್‌ಕೇಸ್‌ನೊಳಗೆ ಶವ ತುಂಬಿರುವುದನ್ನು ಕಂಡು ಪೊಲೀಸರು ಆಘಾತಕ್ಕೊಳಗಾದರು, ಆರೋಪಿಯನ್ನು ಬಂಧಿಸಲಾಗಿದೆ.