ಹರಿಯಾಣದ ಹಿಸಾರ್‌ನಲ್ಲಿ ಭಾನುವಾರ, ಮಾರ್ಚ್ 10 ರಂದು ತನ್ನ 8 ವರ್ಷದ ಮಗಳನ್ನು ಕೊಂದ ನಂತರ ವಿಜ್ಞಾನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪೊಲೀಸರ ಪ್ರಕಾರ, ವಿಜ್ಞಾನಿ ತನ್ನ ಮಗಳನ್ನು ಕತ್ತು ಸೀಳಿ ಕೊಂದಿದ್ದಾನೆ. ಮಾಧ್ಯಮಗಳೊಂದಿಗೆ ಮಾತನಾಡಿದ ಹಿಸಾರ್ ಸಹಾಯಕ ಪೊಲೀಸ್ ಅಧೀಕ್ಷಕ(ಎಎಸ್ಪಿ) ರಾಜೇಶ್ ಮೋಹನ್, ವೈಜ್ಞಾನಿಕ ತನಿಖೆಯ ಭಾಗವಾಗಿ ಮೊಬೈಲ್ ವಿಧಿ ವಿಜ್ಞಾನ ಘಟಕವನ್ನು ಕರೆಯಲಾಗಿದೆ. ಪೊಲೀಸರು ಹತ್ತಿರದ ಜನರು ಮತ್ತು ಮೃತರ ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ವಿಜ್ಞಾನಿ ಸಹೋದ್ಯೋಗಿಗಳ ಪ್ರಕಾರ, ಅವರು ಮಾನಸಿಕ ಚಿಕಿತ್ಸಕರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗಿದೆ. ನಿಖರವಾದ ವೈದ್ಯಕೀಯ ಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ನಾವು ಅವರ ಸಲಹೆಗಾರ ವೈದ್ಯರೊಂದಿಗೆ ಮಾತನಾಡುತ್ತೇವೆ ಎಂದು ಹೇಳಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.