ಹರ್ಯಾಣದ ಪಲ್ವಾಲ್ ನಲ್ಲಿ ಪೊಲೀಸ್ ಇಲಾಖೆಯಲ್ಲಿ 3.20 ಕೋಟಿ ರೂ.ಗಳ ಬೃಹತ್ ಹಗರಣ ಬೆಳಕಿಗೆ ಬಂದಿದ್ದು, ಹಲವು ವರ್ಷಗಳಿಂದ ನಕಲಿ ಚಲನ್ ಗಳನ್ನು ನೀಡಿ ವಂಚಿಸಿದ್ದ ಹೆಡ್ ಕಾನ್ ಸ್ಟೆಬಲ್ ನನ್ನು ಬಂಧಿಸಲಾಗಿದೆ.
ಈ ವರ್ಷದ ಮೇನಲ್ಲಿ ವಿಧಿಸಲಾದ ಕಾರ್ ದಂಡದ ಬಗ್ಗೆ ಎಸ್‌ಪಿ ಲೋಕೇಂದ್ರ ಸಿಂಗ್ ವರದಿ ಕೇಳಿದಾಗ ವಂಚನೆ ಬೆಳಕಿಗೆ ಬಂದಿದೆ. ಎಸ್‌ಪಿ ವರದಿಯನ್ನು ಹೋಲಿಸಿ ನೋಡಿದಾಗ ಇಬ್ಬರು ಟ್ರಾಫಿಕ್ ಕಾನ್ ಸ್ಟೆಬಲ್‌ಗಳು ದಂಡವಾಗಿ ತೆಗೆದುಕೊಂಡ ಹಣಕ್ಕೂ ಮತ್ತು ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದಕ್ಕೂ ಸಾಕಷ್ಟು ವ್ಯತ್ಯಾಸ ಕಂಡುಬಂದಿದೆ.
ನಂತರ, ವಿಚಾರಣೆಯನ್ನು ಪ್ರಾರಂಭಿಸಿದ್ದು, ನಕಲಿ ಚಲನ್ ಗಳು ಕಾಗದಪತ್ರಗಳನ್ನು ಬಳಸಿಕೊಂಡು 3 ಕೋಟಿ ರೂ.ಗೂ ಹೆಚ್ಚು ದುರುಪಯೋಗ ಮಾಡಿಕೊಂಡಿರುವುದು ಗೊತ್ತಾಗಿದೆ. ಇ-ಚಲನ್ ಮೂಲಕ ಪಡೆದ ಹಣ ಮತ್ತು ಬ್ಯಾಂಕ್ ನಲ್ಲಿ ಇರಿಸಲಾದ ಹಣದ ನಡುವಿನ ವ್ಯತ್ಯಾಸದ ಬಗ್ಗೆ ತುರ್ತು ತನಿಖೆ ನಡೆಸುವಂತೆ ಎಸ್ಪಿ ಆದೇಶಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ, ಇ-ಚಲನ್ ಶಾಖೆಯಲ್ಲಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳು, ಹೆಡ್ ಕಾನ್‌ಸ್ಟೆಬಲ್ ಜನಕ್ ಮತ್ತು ಇಹೆಚ್‌ಸಿ ಓಂಬೀರ್ ಅವರು ಹಣ ದುರುಪಯೋಗಪಡಿಸಿಕೊಳ್ಳುತ್ತಿರುವುದು ಕಂಡುಬಂದಿದೆ.
ಈ ಅಧಿಕಾರಿಗಳು ಅನೇಕ ವರ್ಷಗಳಿಂದ ಅಧಿಕೃತ ಖಾತೆಗಳಿಗೆ ಹೋಗಬೇಕಾದ ಸರ್ಕಾರಿ ಹಣವನ್ನು ಬಳಸುತ್ತಿದ್ದರು. ಇಬ್ಬರು ಟ್ರಾಫಿಕ್ ಕಾನ್ ಸ್ಟೆಬಲ್‌ಗಳಲ್ಲಿ ಒಬ್ಬರನ್ನು ಬಂಧಿಸಲಾಗಿದೆ. ಉಳಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.