
ಇಡೀ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ. ಸರಗಳ್ಳರಿಬ್ಬರು ವೃದ್ಧೆಯಿಂದ ಸರ ಕದ್ದು ಬೈಕ್ ನಲ್ಲಿ ಪರಾರಿಯಾಗಲು ಯತ್ನಿಸುತ್ತಾರೆ. ಇದನ್ನು ಎದುರುಗಡೆ ಇಂದ ಬರ್ತಿದ್ದ ಬಸ್ ಚಾಲಕ ಗಮನಿಸಿದ್ದು, ಹಿಂಜರಿಯದೆ ಬಸ್ಸನ್ನು ಚಲಾಯಿಸಿ ಉದ್ದೇಶಪೂರ್ವಕವಾಗಿ ಬೈಕ್‌ಗೆ ಡಿಕ್ಕಿ ಹೊಡೆಸಿದ್ದಾರೆ. ಈ ವೇಳೆ ಕಳ್ಳರು ಸಮತೋಲನ ತಪ್ಪಿ ಬಿದ್ದಿದ್ದಾರೆ. ಆದರೆ ಕಳ್ಳರು ತಕ್ಷಣ ಸ್ಥಳದಿಂದ ಕಾಲ್ಕಿತ್ತರು. ಬಳಿಕ ಅವರು ಸಿಕ್ಕಿಬಿದ್ದಿದ್ದಾರೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ.
ಆದರೆ ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತ್ವರಿತವಾಗಿ ಹರಿದಾಡುತ್ತಿದೆ. ಬಸ್ ಚಾಲಕನ ತ್ವರಿತ ಆಲೋಚನೆ ಮತ್ತು ಧೈರ್ಯ ಪ್ರಯಾಣಿಕರು ಸೇರಿದಂತೆ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಗಿದೆ.