ಜೈಲಿನಲ್ಲಿರುವ ಕೈದಿಗಳಿಗೆ ವಿವಿಧ ತರಬೇತಿ ನೀಡುವ ಕಾರ್ಯ ಮುಂಚಿನಿಂದಲೂ ನಡೆದುಕೊಂಡು ಬಂದಿದೆ. ಇದೀಗ ಹೊಸ ಪ್ರಯತ್ನವಾಗಿ ಹರಿಯಾಣದ ಕುರುಕ್ಷೇತ್ರದ ಜೈಲಿನಲ್ಲಿ ಪೆಟ್ರೋಲ್ ಬಂಕ್ ಒಂದನ್ನು ಆರಂಭಿಸಲಾಗಿದೆ.
ಪ್ರಾಯೋಗಿಕ ಯೋಜನೆಯಾಗಿ ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆಯ ಭಾಗವಾಗಿ ಸ್ಥಾಪಿಸಲಾಗಿದೆ. ಈ ಪ್ರಯತ್ನ ಯಶಸ್ವಿಯಾದರೆ, ಮುಂದಿನ ಎರಡು ವರ್ಷಗಳಲ್ಲಿ ರಾಜ್ಯದ 11 ಜೈಲುಗಳಲ್ಲಿ ಇಂತಹ ಹೆಚ್ಚಿನ ಪೆಟ್ರೋಲ್ ಪಂಪ್‌ಗಳನ್ನು ತೆರೆಯುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ.
ಸರೋವರದಲ್ಲಿ ತಿರುಗುತ್ತಿರುವ ಸುಳಿಯ ಫೋಟೋ ವೈರಲ್..!
ಈ ಪೆಟ್ರೋಲ್ ಪಂಪ್‌ನಲ್ಲಿ ಬೆಳಿಗ್ಗೆ ಪಾಳಿಯಲ್ಲಿ ಕೈದಿಗಳನ್ನು ನಿಯೋಜಿಸಲಾಗುವುದು ಮತ್ತು ರಾತ್ರಿ ಪಾಳಿಯಲ್ಲಿ ಜೈಲು ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಂಪ್‌ಗೆ ‘ಜೈಲ್ ಪಂಪಿಂಗ್ ಸ್ಟೇಷನ್’ ಎಂದು ಸೂಕ್ತವಾಗಿ ಹೆಸರಿಸಲಾಗಿದೆ.
ಕಾರಾಗೃಹದ ಆವರಣದಲ್ಲಿ ಪೆಟ್ರೋಲ್ ಪಂಪ್ ಸ್ಥಾಪಿಸಲು ಕಾರಾಗೃಹ ಇಲಾಖೆ ಕೈಗೊಂಡಿರುವ ಮೊದಲ ಪ್ರಯತ್ನ ಇದಾಗಿದೆ ಎಂದು ಹಿರಿಯ ಅಧಿಕಾರಿ ಅಕಿಲ್ ಹೇಳಿದ್ದಾರೆ.