ಚಂಡೀಗಢ: ಹರಿಯಾಣದಲ್ಲಿ ಬಿಜೆಪಿ ಸರ್ಕಾರಕ್ಕೆ ಬಿಕ್ಕಟ್ಟು ಉಂಟಾಗಿದೆ. ಬಿಜೆಪಿ ಸರ್ಕಾರವನ್ನು ಬೆಂಬಲಿಸುತ್ತಿದ್ದ ಮೂವರು ಸ್ವತಂತ್ರ ಶಾಸಕರು ಬೆಂಬಲ ಹಿಂಪಡೆದಿದ್ದಾರೆ. ಇದರಿಂದಾಗಿ ನಯಾಬ್ ಸಿಂಗ್ ಸೈನಿ ನೇತೃತ್ವದ ಸರ್ಕಾರಕ್ಕೆ ಹಿನ್ನಡೆಯಾಗಿದೆ.
ನಿರ್ಗಮಿಸಿದ್ದಾರೆ. ಅವರ ನಿರ್ಗಮನದೊಂದಿಗೆ ಹರಿಯಾಣದ ನಯಾಬ್ ಸರ್ಕಾರವು ಅಲ್ಪ ಮತಕ್ಕೆ ಕುಸಿದಿದೆ.
ಮೂವರು ಶಾಸಕರು ಈಗ ಕಾಂಗ್ರೆಸ್ ಬೆಂಬಲ ಘೋಷಿಸಿದ್ದಾರೆ. ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ಭೂಪೇಂದ್ರ ಹೂಡಾ ಅವರ ಸಮ್ಮುಖದಲ್ಲಿ, ಪುಂಡ್ರಿ ಕ್ಷೇತ್ರದ ಸ್ವತಂತ್ರ ಶಾಸಕ ರಣಧೀರ್ ಗೋಲನ್, ನಿಲೋಖೇರಿಯ ಶಾಸಕ ಧರಂಪಾಲ್ ಗೊಂಡರ್ ಮತ್ತು ಚಾರ್ಖಿ ದಾದ್ರಿ ಶಾಸಕ ಸೋಮ್ವಿರ್ ಸಾಂಗ್ವಾನ್ ಅವರು ರೋಹ್ಟಕ್‌ನಲ್ಲಿ ಬಿಜೆಪಿ ಸರ್ಕಾರಕ್ಕೆ ತಮ್ಮ ಬೆಂಬಲವನ್ನು ಹಿಂಪಡೆದಿದ್ದಾರೆ.
ಸರ್ಕಾರದ ನೀತಿಗಳಿಂದ ನಮಗೆ ಸಂತೋಷವಿಲ್ಲ ಹೀಗಾಗಿ ಬಿಜೆಪಿ ಸರ್ಕಾರಕ್ಕೆ ಬೆಂಬಲ ಹಿಂತೆಗೆದುಕೊಳ್ಳುತ್ತಿದ್ದೇವೆ ಎಂದು ಮೂವರು ಸ್ವತಂತ್ರ ಶಾಸಕರು ಹೇಳಿದ್ದಾರೆ.
ಸ್ವತಂತ್ರ ಶಾಸಕರು ಬಿಜೆಪಿಗೆ ನೀಡಿದ ಬೆಂಬಲ ಹಿಂತೆಗೆದುಕೊಂಡ ನಂತರ ಹರಿಯಾಣದಲ್ಲಿ ಬಹುಮತ ಕುಸಿದಿದೆ. 90 ಸ್ಥಾನಗಳ ಹರಿಯಾಣ ವಿಧಾನಸಭೆಯಲ್ಲಿ ಬಹುಮತದ ಸಂಖ್ಯೆ 45. ಬಿಜೆಪಿ 41 ಶಾಸಕರನ್ನು ಹೊಂದಿದ್ದರೆ, 6 ಸ್ವತಂತ್ರ ಶಾಸಕರ ಬೆಂಬಲವೂ ಇದೆ. ಈ ಪೈಕಿ ಮೂವರು ಈಗ ತಮ್ಮ ಬೆಂಬಲವನ್ನು ಹಿಂಪಡೆದಿದ್ದಾರೆ. ಈ ರೀತಿ ನೋಡಿದರೆ, ಹರಿಯಾಣದ ಸೈನಿ ಸರ್ಕಾರದಲ್ಲಿ ಪ್ರಸ್ತುತ 44 ಶಾಸಕರು ಮಾತ್ರ ಉಳಿದಿದ್ದಾರೆ.