alex Certify ʼವಿಚ್ಛೇದನʼ ಸಿಕ್ಕ ಖುಷಿಯಲ್ಲಿ ಭರ್ಜರಿ ಪಾರ್ಟಿ; ಮಾಜಿ ಪತ್ನಿ ಪ್ರತಿಕೃತಿ ಜೊತೆ ಪೋಸ್‌ ಕೊಟ್ಟ ವ್ಯಕ್ತಿ | Watch | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼವಿಚ್ಛೇದನʼ ಸಿಕ್ಕ ಖುಷಿಯಲ್ಲಿ ಭರ್ಜರಿ ಪಾರ್ಟಿ; ಮಾಜಿ ಪತ್ನಿ ಪ್ರತಿಕೃತಿ ಜೊತೆ ಪೋಸ್‌ ಕೊಟ್ಟ ವ್ಯಕ್ತಿ | Watch

Haryana man celebrates his divorce, poses with mannequin of ex-wife

ಪ್ರಸ್ತುತ ಮದುವೆ ಸೀಸನ್‌ ಆರಂಭವಾಗಿದ್ದು, ಮದುವೆ ಪೂರ್ವ, ಬ್ಯಾಚುಲರ್ ಪಾರ್ಟಿ ಮತ್ತು ಮದುವೆಯ ನಂತರದ ಫೋಟೋಶೂಟ್‌ ಸಾಮಾನ್ಯವಾಗಿದೆ. ಇದರ ಮಧ್ಯೆ ವಿದೇಶದಲ್ಲಿ ಜನಪ್ರಿಯವಾಗಿರುವ ವಿಚ್ಛೇದನದ ಆಚರಣೆಗಳ ಪರಿಕಲ್ಪನೆಯು ಈಗ ಭಾರತದಲ್ಲೂ ಆರಂಭವಾದಂತಿದ್ದು, ಇದರ ಒಂದು ಫೋಟೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

2020 ರಲ್ಲಿ ಕೋಮಲ್ ಎಂಬಾಕೆಯನ್ನು ವಿವಾಹವಾಗಿದ್ದ ಹರಿಯಾಣದ ಮಂಜೀತ್, ತಮ್ಮ ದಾಂಪತ್ಯ ಜೀವನದ ಕುರಿತು ಅತೃಪ್ತಿ ಹೊಂದಿದ್ದು, ಈ ವರ್ಷ ವಿಚ್ಛೇದನ ಪಡೆದುಕೊಂಡಿದ್ದಾರೆ. ಇದರ ಆಚರಣೆಗೆ ಮುಂದಾದ ಮಂಜೀತ್ ವಿಚ್ಛೇದನದ ಪಾರ್ಟಿಯನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಮದುವೆಯ ಫೋಟೋ, ಮದುವೆಯ ದಿನಾಂಕ ಮತ್ತು ವಿಚ್ಛೇದನದ ದಿನಾಂಕವನ್ನು ಪ್ರದರ್ಶಿಸುವ ಪೋಸ್ಟರ್‌ನೊಂದಿಗೆ ಪೋಸ್‌ ಕೊಟ್ಟಿದ್ದಾರೆ. ಈ ಆಚರಣೆ ವೇಳೆ ಕೇಕ್‌ ಕೂಡಾ ಕತ್ತರಿಸಲಾಗಿದೆ.

ಅಲ್ಲದೇ, ಮಂಜೀತ್ ತನ್ನ ಮಾಜಿ-ಪತ್ನಿಯನ್ನು ಪ್ರತಿನಿಧಿಸುವ ಮನುಷ್ಯಾಕೃತಿಯನ್ನು ಈ ಪಾರ್ಟಿ ವೇಳೆ ಸೇರ್ಪಡೆ ಮಾಡಿಕೊಂಡಿದ್ದು, ಈ ಆಕೃತಿಯೊಂದಿಗೆ ಪೋಸ್ ನೀಡಿದ್ದಾರೆ. ವೈರಲ್ ಫೋಟೋ ವಿವಿಧ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದ್ದು, ಕೆಲವು ಕಾಮೆಂಟ್‌ಗಳು ವ್ಯಕ್ತಿಗಳನ್ನು ಅಂತಹ ವಿಪರೀತಗಳಿಗೆ ಕೊಂಡೊಯ್ಯುವ ಹತಾಶೆಯನ್ನು ಎತ್ತಿ ತೋರಿಸಿದರೆ, ಇತರರು ಹೊಂದಿಕೆಯಾಗದ ದಾಂಪತ್ಯ ಜೀವನದ ಪರಿಣಾಮಗಳನ್ನು ಸೂಚಿಸಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...