ಚಂಡೀಗಢ: ಹರಿಯಾಣದಲ್ಲಿ ಇಂಟರ್ನೆಟ್ ಸೇವೆ ನಿಷೇಧ ಮುಂದುವರಿಸಲಾಗಿದೆ. ಐದು ಜಿಲ್ಲೆಗಳಲ್ಲಿ ಇಂದು ಸಂಜೆ 5 ಗಂಟೆಯವರೆಗೆ ಇಂಟರ್ನೆಟ್ ನಿಷೇಧ ಮಾಡಲಾಗಿದೆ.
ಬಲ್ಕ್ ಎಸ್ಎಂಎಸ್, ಡ್ಯಾಂಗಲ್ ಸೇವೆ ನಿಷೇಧಿಸಿ ಹರಿಯಾಣ ಸರ್ಕಾರ ಆದೇಶ ಹೊರಡಿಸಿದೆ. ಕೈತಾಲ್, ಜಿಂದ್, ರೋಹ್ಟಕ್, ಝಜ್ಜರ್ ಜಿಲ್ಲೆಗಳಲ್ಲಿ ಸಂಜೆ 5 ಗಂಟೆವರೆಗೆ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ. ದೆಹಲಿಯಲ್ಲಿ ರೈತರ ಹೋರಾಟ ಮುಂದುವರೆದ ಹಿನ್ನಲೆಯಲ್ಲಿ ರೈತರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಹೋರಾಟ ಬೆಂಬಲಿಸಿ ಅಪಾರ ಸಂಖ್ಯೆಯ ರೈತರು ದೆಹಲಿಯತ್ತ ದೌಡಾಯಿಸತೊಡಗಿದ್ದಾರೆ. ಇದನ್ನು ತಡೆಯಲು ಇಂಟರ್ ನೆಟ್ ಸ್ಥಗಿತಗೊಳಿಸಲಾಗಿದೆ ಎಂದು ಹೇಳಲಾಗಿದೆ.