ಚಂಡೀಗಡ: ದಿನೇ ದಿನೇ ಹೆಚ್ಚುತ್ತಿರುವ ಕೋವಿಡ್ -19 ಸೋಂಕಿನ ಹಿನ್ನೆಲೆ, ನಾಲ್ಕನೇ ಕೊರೋನಾ ಅಲೆಯ ಭೀತಿ ಎದುರಾಗಿದ್ದು, ಹರಿಯಾಣ ಸರ್ಕಾರವು 18-59 ವರ್ಷ ವಯಸ್ಸಿನ ಎಲ್ಲ ಜನರಿಗೆ ಉಚಿತ ಕೋವಿಡ್ -19 ಬೂಸ್ಟರ್ ಡೋಸ್ ಅನ್ನು ಘೋಷಿಸಿದೆ.
ಹರಿಯಾಣದ ಮಾಹಿತಿ ನಿರ್ದೇಶನಾಲಯವು, ರಾಜ್ಯದ ಜನರ ಆರೋಗ್ಯಕ್ಕೆ ಆದ್ಯತೆ ನೀಡಿ, ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಕೋವಿಡ್ ವಿರೋಧಿ ಲಸಿಕೆ ಅಭಿಯಾನದಲ್ಲಿ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದ್ದು, 18 ವರ್ಷದಿಂದ 59 ವರ್ಷ ವಯಸ್ಸಿನ ವಯಸ್ಕ ನಾಗರಿಕರವರೆಗೂ ಉಚಿತ ಬೂಸ್ಟರ್ ಡೋಸ್ ಘೋಷಿಸಿದ್ದಾರೆ.
ದೋಸೆ ಮಾರಾಟಗಾರನ ಅಸಾಧಾರಣ ಕೌಶಲ್ಯಕ್ಕೆ ಪ್ರಭಾವಿತರಾದ ಉದ್ಯಮಿ ಹರ್ಷ್ ಗೋಯೆಂಕಾ; ಅಷ್ಟಕ್ಕೂ ಅಂಥದ್ದೇನಿದೆ ಗೊತ್ತಾ..?
ಹರಿಯಾಣ ಡಿಪಿಆರ್ ಪ್ರಕಾರ, ಅರ್ಹ ಫಲಾನುಭವಿಗಳು ಹರಿಯಾಣದ ಯಾವುದೇ ಸರ್ಕಾರಿ ಆಸ್ಪತ್ರೆ ಅಥವಾ ಡಿಸ್ಪೆನ್ಸರಿಯಿಂದ ರೂ.250 ಬೂಸ್ಟರ್ ಡೋಸ್ ಅನ್ನು ಉಚಿತವಾಗಿ ಪಡೆಯಬಹುದು. ಹರಿಯಾಣ ರಾಜ್ಯದಲ್ಲಿ 18 ವರ್ಷದಿಂದ 59 ವಯೋಮಾನದ ಸುಮಾರು 1.2 ಕೋಟಿ ಫಲಾನುಭವಿಗಳಿದ್ದಾರೆ. ಇದಕ್ಕಾಗಿ ಸುಮಾರು 300 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುವುದು, ಇದನ್ನು ಕೋವಿಡ್ ಪರಿಹಾರ ನಿಧಿಯಿಂದ ರಾಜ್ಯವು ಭರಿಸಲಿದೆ ಎಂದು ಡಿಪಿಆರ್ ತಿಳಿಸಿದೆ.
ಏತನ್ಮಧ್ಯೆ, ಹರಿಯಾಣ ಸಿಎಂ ಖಟ್ಟರ್, ಜನರು ಮಾಸ್ಕ್ ಧರಿಸುವಂತೆ ಮತ್ತು ಆಗಾಗ್ಗೆ ಕೈ ತೊಳೆಯುವಂತಹ ಕೊರೋನಾ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಮನವಿ ಮಾಡಿದರು. ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸುವುದು ಕರೋನಾ ವಿರುದ್ಧದ ಹೋರಾಟದಲ್ಲಿ ದೊಡ್ಡ ಅಸ್ತ್ರವಾಗಿದೆ ಎಂದು ಹೇಳಿದ್ದಾರೆ.