ಮನಸ್ಸಿದ್ದಲ್ಲಿ ಮಾರ್ಗವಿದೆ ಎಂಬ ಗಾದೆ ಮಾತಿದೆ. ಈ ಮಾತಿಗೆ ಇಬ್ಬರು ಇಂಜಿನಿಯರ್ಗಳು ಪ್ರತ್ಯಕ್ಷ ಉದಾಹರಣೆಯಾಗಿ ನಿಂತಿದ್ದಾರೆ. ಕಚೇರಿಯಲ್ಲಿ ಸಿಗುತ್ತಿದ್ದ ಸಂಬಳದಿಂದ ಬೇಸರ ಹೊಂದಿದ್ದ ಹರಿಯಾಣದ ಇಬ್ಬರು ಇಂಜಿನಿಯರ್ಗಳು ತಮ್ಮ ಕೆಲಸವನ್ನು ಬಿಟ್ಟು ಬೀದಿ ಬದಿಯಲ್ಲಿ ವೆಜ್ ಬಿರಿಯಾನಿಯನ್ನು ಮಾರಲು ಆರಂಭಿಸಿದರು. ಅಲ್ಲದೇ ನಮಗೆ ಕಚೇರಿ ಕೆಲಸಕ್ಕಿಂತ ಈ ಕೆಲಸವೇ ಹೆಚ್ಚು ಖುಷಿ ಕೊಟ್ಟಿದೆ ಅಂತಾರೆ ಈ ಇಬ್ಬರು ಇಂಜಿನಿಯರ್ಗಳು..!
ಕೈಯಲ್ಲಿರುವ ಕೆಲಸ ಹಾಗೂ ಸಿಗುತ್ತಿರೋ ಸಂಬಳ ಈ ಎರಡರಿಂದಲೂ ಖುಷಿ ಇಲ್ಲ ಎಂಬುದನ್ನು ಅರಿತ ರೋಹಿತ್ ಹಾಗೂ ಸಚಿನ್ ಇಂಜಿನಿಯರ್ಸ್ ವೆಜ್ ಬಿರಿಯಾನಿ ಎಂಬ ಪುಟ್ಟ ಅಂಗಡಿಯನ್ನು ತೆರೆದರು. ಇಬ್ಬರೂ ಇಂಜಿನಿಯರ್ ಪದವೀಧರರು. ಈ ಇಬ್ಬರೂ ಈಗ ತಮಗೆ ಹಿಂದೆ ಇದ್ದ ಸಂಬಳಕ್ಕಿಂತ ಹೆಚ್ಚು ದುಡಿಯುತ್ತಿದ್ದಾರಂತೆ.
ಎಣ್ಣೆಯಲ್ಲಿ ತಯಾರಿಸದ ವೆಜ್ ಬಿರಿಯಾನಿ ಇದಾಗಿದ್ದು ಅರ್ಧ ಪ್ಲೇಟ್ಗೆ 50 ರೂಪಾಯಿ ಹಾಗೂ ಫುಲ್ ಪ್ಲೇಟ್ಗೆ 70 ರೂಪಾಯಿ ನಿಗದಿಪಡಿಸಲಾಗಿದೆ. ನಾವು ಉದ್ಯಮದಿಂದಲೇ ನಿರೀಕ್ಷೆಗೂ ಮೀರಿದಷ್ಟು ಹಣ ಗಳಿಸುತ್ತಿದ್ದೇವೆ ಎಂದು ರೋಹಿತ್ ಹಾಗೂ ಸಚಿನ್ ಹೇಳಿದ್ದಾರೆ.