
ಹರಿಯಾಣ ಚುನಾವಣೆ 2024 ಹಿನ್ನೆಲೆಯಲ್ಲಿ ಸೆಹ್ವಾಗ್ ಕಾಂಗ್ರೆಸ್ ಅಭ್ಯರ್ಥಿ ಅನಿರುದ್ಧ ಚೌಧರಿ ಅವರ ರ್ಯಾಲಿಗಳು ಮತ್ತು ಪ್ರಚಾರದ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಮತಯಂತ್ರದಲ್ಲಿ ಚೌಧರಿ ಹೆಸರಿನ ಮುಂದೆ ಬಟನ್ ಒತ್ತುತ್ತಿರುವಂತೆ ತೋರುವ ಇಮೇಜ್ ಕೂಡ ಹಂಚಿಕೊಂಡಿದ್ದಾರೆ.
2019 ರ ಚುನಾವಣೆಯಲ್ಲಿ ಸ್ಪರ್ಧಿಸಲು ಸೆಹ್ವಾಗ್‌ಗೆ ಬಿಜೆಪಿ ಟಿಕೆಟ್ ಆಫರ್ ನೀಡಿತ್ತು. ಇದರಿಂದ ವೀರೇಂದ್ರ ಸೆಹ್ವಾಗ್ ಬಿಜೆಪಿ ಬೆಂಬಲಿಗರು ಎಂದು ತಿಳಿಯಲಾಗಿತ್ತು. ಆದರೂ ಆ ವೇಳೆ ಸೆಹ್ವಾನ್ ಟಿಕೆಟ್ ಆಫರ್ ತಿರಸ್ಕರಿಸಿದ್ದರು. ಇದೀಗ ಕಾಂಗ್ರೆಸ್ ಪರ ಅವರ ಪೋಸ್ಟ್ ನೆಟ್ಟಿಗರನ್ನು ಗೊಂದಲಕ್ಕೀಡು ಮಾಡಿದೆ.
45 ವರ್ಷದ ಸೆಹ್ವಾಗ್ , ಕಳೆದ ವಾರ ತಮ್ಮ ಟ್ವೀಟ್‌ಗಳಲ್ಲಿ ಮೋದಿ ಸರ್ಕಾರವನ್ನು ಪ್ರಶ್ನಿಸಿದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಟೀಕೆ ಎದುರಿಸಿದರು, ನಂತರ ಪೋಸ್ಟ್ ಡಿಲೀಟ್ ಮಾಡಿದರು. ಪಿಎಸ್‌ಯು ಬ್ಯಾಂಕ್‌ಗಳ ದೃಢತೆಯ ಬಗ್ಗೆ ಪ್ರಧಾನಿ ಮೋದಿ ಅವರ ಪೋಸ್ಟ್ ಟೀಕಿಸಿ ವಿರೋಧಿಸಿ ಪ್ರಶ್ನಿಸಿದ್ದರು.