
ಜುಲೈ 16 ರಂದು ನಟಿ ಕತ್ರೀನಾ ತನ್ನ 40ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಹಿತೈಷಿಗಳು ಮತ್ತು ಅಭಿಮಾನಿಗಳಿಂದ ಶುಭಾಶಯಗಳು ಮಹಾಪೂರವೇ ಹರಿದುಬಂದಿದೆ. ಅಷ್ಟೇ ಅಲ್ಲ, ಅಭಿಮಾನಿಯೊಬ್ಬ ನಟಿಯನ್ನು ಪೂಜಿಸುತ್ತಿರುವ ಚಿತ್ರವೊಂದು ವೈರಲ್ ಆಗಿದೆ.
ಹೌದು, ಹರಿಯಾಣದ ಧನಿ ಫೋಗಟ್‌ನಲ್ಲಿರುವ ಚಾರ್ಕಿ ದಾದ್ರಿ ಗ್ರಾಮದ ಬಂಟು ಮತ್ತು ಅವರ ಪತ್ನಿ, ಕತ್ರಿನಾರನ್ನು ದೇವತೆಯಂತೆ ಪೂಜಿಸುತ್ತಾರೆ. ಹೀಗಾಗಿ ನಟಿಯ ಬರ್ತ್ ಡೇ ದಿನ ಪೂಜೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ, ಪ್ರತಿ ವರ್ಷ ನಟಿಯ ಹುಟ್ಟುಹಬ್ಬದಂದು ದಂಪತಿ ಕೇಕ್ ಕತ್ತರಿಸಿ ಲಡ್ಡುಗಳನ್ನು ಹಂಚುತ್ತಾರೆ. ಕಳೆದ 10 ವರ್ಷಗಳಿಂದ ಈ ದಂಪತಿ ಕತ್ರಿನಾಳನ್ನು ಪೂಜಿಸುತ್ತಿದ್ದಾರಂತೆ. ಒಮ್ಮೆ ನಟಿಯನ್ನು ಭೇಟಿಯಾಗಬೇಕು ಅನ್ನೋದು ದಂಪತಿಯ ಏಕೈಕ ಆಸೆಯಾಗಿದೆ.
ಈಗ ವೈರಲ್ ಆಗಿರುವ ಚಿತ್ರದಲ್ಲಿ, ಕತ್ರಿನಾ ಫೋಟೋದ ಮುಂದೆ ದಂಪತಿ ಕೈ ಜೋಡಿಸಿ ನಿಂತಿದ್ದಾರೆ. ನಟಿ ಫೋಟೋದ ಮುಂದೆ ಅವರು ಪ್ರತಿದಿನ ಆರತಿಯನ್ನೂ ಮಾಡುತ್ತಾರೆ.