
ಪರೀಕ್ಷೆಯಲ್ಲಿ ನಕಲು ಮಾಡಲು ವಿದ್ಯಾರ್ಥಿಗಳು ನಾನಾ ಕಸರತ್ತು ಮಾಡುತ್ತಾರೆ, ಅನೇಕ ಬಾರಿ ಸಿಕ್ಕಿಬೀಳುತ್ತಾರೆ. ಇಲ್ಲೊಬ್ಬ ವಿದ್ಯಾರ್ಥಿ ಕಾಪಿ ಹೊಡೆಯಲು ಹೊಸ ದಾರಿ ಕಂಡುಕೊಂಡು ಸಿಕ್ಕಿಬಿದ್ದಿದ್ದಾನೆ.
ಫತೇಹಾಬಾದ್ ಜಿಲ್ಲೆಯಲ್ಲಿ ತನ್ನ ಬೋರ್ಡ್ ಪರೀಕ್ಷೆಯ ಸಮಯದಲ್ಲಿ ನಕಲು ಮಾಡುತ್ತಿದ್ದಾಗ 10ನೇ ತರಗತಿಯ ವಿದ್ಯಾರ್ಥಿಯು ಫ್ಲೈಯಿಂಗ್ ಸ್ಕ್ವಾಡ್ ಬಳಿ ಸಿಕ್ಕಿಬಿದ್ದಿದ್ದಾನೆ.
ಗಮನಾರ್ಹ ಸಂಗತಿ ಎಂದರೆ ವಿದ್ಯಾರ್ಥಿಯು ಗ್ಲಾಸ್ ಕ್ಲಿಪ್‌ಬೋರ್ಡ್ ಬಳಸುತ್ತಿದ್ದನು ಮತ್ತು ಅದರ ಮಧ್ಯದಲ್ಲಿ ಮೊಬೈಲ್ ಫೋನ್ ಅಂಟಿಕೊಂಡಿದ್ದ, ನಕಲು ಮಾಡಲು ವಾಟ್ಸಾಪ್ ಸೇರಿದಂತೆ ಹಲವಾರು ಅಪ್ಲಿಕೇಶನ್‌ಗಳನ್ನು ತೆರೆದಿದ್ದ. ಫೋನ್ ಕಾಣದಂತೆ ಕಾಗದದಿಂದ ಮರೆಮಾಡಿದ್ದ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿದ್ಯಾರ್ಥಿಯ ವಾಟ್ಸಾಪ್ ಚಾಟ್‌ನಲ್ಲಿ ಪೋಸ್ಟ್ ಮಾಡಲಾದ ಪಠ್ಯಪುಸ್ತಕದ ಪುಟಗಳ 11 ಚಿತ್ರಗಳನ್ನು ವಿಡಿಯೊದಲ್ಲಿ ಕಾಣಬಹುದು.
ವಿದ್ಯಾರ್ಥಿ ಮೊಬೈಲ್ ಫೋನ್ ಗ್ಯಾಲರಿಯಲ್ಲಿ ಪರೀಕ್ಷೆ ಎದುರಿಸುತ್ತಿದ್ದ ಇಂಗ್ಲಿಷ್ ವಿಷಯದ ಮಾಹಿತಿ ಉಳಿಸಿ ಅಲ್ಲಿಂದ ಮೋಸ ಮಾಡುತ್ತಿದ್ದ.
ಮೊಬೈಲ್ ಫೋನ್‌ನಲ್ಲಿ ಪರೀಕ್ಷೆಯ ಪ್ರಶ್ನೆಗಳಿಗೆ ಸ್ಕ್ವಾಡ್ ಉತ್ತರಗಳನ್ನು ಕಂಡುಕೊಂಡ ನಂತರ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ದೀಪೇಂದರ್ ದೇಸ್ವಾಲ್ ಎಂಬುವರು ವಿಡಿಯೊವನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.