ನವದೆಹಲಿ: ಹರಿಯಾಣದ ನುಹ್ ನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದೆ. ಶನಿವಾರ ಬಸ್ ಗೆ ಬೆಂಕಿ ತಗುಲಿ ಸುಮಾರು ಹತ್ತು ಜನರು ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ನುಹ್ ವೈದ್ಯಕೀಯ ಕಾಲೇಜಿಗೆ ಕರೆತರಲಾಗಿದೆ.
ರಕ್ಷಣಾ ಕಾರ್ಯಾಚರಣೆ, ಬೆಂಕಿ ನಂದಿಸುವ ಕಾರ್ಯಾಚರಣೆ ನಡೆದಿದೆ.
ನುಹ್ ಶಾಸಕ ಅಫ್ತಾಬ್ ಅಹ್ಮದ್, ಇದು ತುಂಬಾ ನೋವಿನ, ದುಃಖ ಮತ್ತು ಹೃದಯ ವಿದ್ರಾವಕ ಘಟನೆ ಎಂದು ನಾನು ಹೇಳುತ್ತೇನೆ, ಭಕ್ತರು ವೃಂದಾವನದಿಂದ ಹಿಂತಿರುಗುತ್ತಿದ್ದರು. ಬಸ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ವೃದ್ಧರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವಾರು ಜನರು ಗಾಯಗೊಂಡರು ಎಂದು ಹೇಳಿದ್ದಾರೆ.
ಗಾಯಾಳುಗಳಲ್ಲಿ ಒಬ್ಬರಾದ ಮೀನಾ ರಾಣಿ, ನಾವು ವೃಂದಾವನದಿಂದ ಹಿಂತಿರುಗುತ್ತಿದ್ದೆವು, ಬೆಂಕಿ ಹೇಗೆ ಸಂಭವಿಸಿದೆ ಎಂದು ನಮಗೆ ತಿಳಿದಿಲ್ಲ, 10 ಜನರು ಸಾವನ್ನಪ್ಪಿದ್ದಾರೆ. 64 ಜನರು ಬಸ್‌ನಲ್ಲಿ ಇದ್ದರು ಎಂದು ಹೇಳಿದರು.
ಶನಿವಾರ ಹರ್ಯಾಣದ ನುಹ್ ಬಳಿ ಕುಂಡಲಿ-ಮನೇಸರ್-ಪಲ್ವಾಲ್ ಎಕ್ಸ್ ಪ್ರೆಸ್ ವೇಯಲ್ಲಿ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಹತ್ತು ಭಕ್ತರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಭಕ್ತರು ಉತ್ತರ ಪ್ರದೇಶದ ಮಥುರಾ ಮತ್ತು ವೃಂದಾವನಕ್ಕೆ ಯಾತ್ರೆ ಮುಗಿಸಿ ಹಿಂತಿರುಗುತ್ತಿದ್ದರು.
ಬಸ್‌ನಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಒಂದು ಕುಟುಂಬದ 60 ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು, ಅವರೆಲ್ಲರೂ ಪಂಜಾಬ್‌ನ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.
ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.
(ಸಾಂದರ್ಭಿಕ ಚಿತ್ರ)