ಶಾಸನಸಭೆಯಿಂದ ಅನರ್ಹಗೊಂಡಿದ್ದ ಹನ್ನೊಂದು ಮಾಜಿ ಶಾಸಕರು ಬರೋಬ್ಬರಿ ಹನ್ನೊಂದು ವರ್ಷಗಳಿಂದ ಸರ್ಕಾರದಿಂದ ಪಿಂಚಣಿ ಹಾಗೂ ಭತ್ಯೆ ಪಡೆದುಕೊಳ್ಳುತ್ತಿರುವ ಶಾಕಿಂಗ್ ಸಂಗತಿ ಬಯಲಾಗಿದೆ.
ಇದು ನಡೆದಿರುವುದು ಹರಿಯಾಣದಲ್ಲಿ. ಈ ರೀತಿ ಜನರ ತೆರಿಗೆ ಹಣ ದುರುಪಯೋಗವಾಗುತ್ತಿದ್ದುದು ಮಾಹಿತಿ ಹಕ್ಕು ಕಾಯ್ದೆಯಿಂದ ಬಯಲಾಗಿದ್ದು, ಅನರ್ಹ ಶಾಸಕರು ಪಿಂಚಣಿ, ಪ್ರವಾಸ ಭತ್ಯೆ, ಇತರ ಭತ್ಯೆಯನ್ನು ಪಡೆದುಕೊಂಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
2010ರಲ್ಲಿ ಸ್ಪೀಕರ್ ಆಗಿದ್ದ ಚೌಧರಿ ಸತ್ಬೀರ್ ಸಿಂಗ್ ಅವರು ಹನ್ನೊಂದು ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆಯ ಪ್ರಕಾರ ಅನರ್ಹಗೊಳಿಸಿದ್ದರು. ಈ ಪೈಕಿ ಆರು ಮಂದಿಯನ್ನು ಸುಪ್ರೀಂ ಕೋರ್ಟ್ ಅನರ್ಹಗೊಳಿಸಿತ್ತು.
ಮಲಬದ್ಧತೆಗೆ ಇಲ್ಲಿದೆ ‘ಮನೆ ಮದ್ದು’
ಈ ಅನರ್ಹ ಶಾಸಕರು ಪ್ರತಿ ತಿಂಗಳು 51,800 ರೂ. ಪಿಂಚಣಿ ಮತ್ತು 10,000 ರೂ. ಪ್ರಯಾಣ ಭತ್ಯೆ ಪಡೆಯುತ್ತಿದ್ದಾರೆ ಎಂದು ಆರ್‌ಟಿಐ ಕಾರ್ಯಕರ್ತ ಹೇಳಿದರು.
ಕಾಂಗ್ರೆಸ್ ಮಾತ್ರವಲ್ಲದೆ ಎಲ್ಲ ಪಕ್ಷಗಳಿಗೆ ಸೇರಿದ ಶಾಸಕರು ಈ ಸೇವೆಯನ್ನು ಬಳಸುತ್ತಿದ್ದಾರೆ. ಆರ್‌ಟಿಐ ವರದಿಗೆ ಪ್ರತಿಕ್ರಿಯಿಸಿದ ಹರಿಯಾಣದ ಬಿಜೆಪಿ, ಅನರ್ಹ ಶಾಸಕರು ಸರ್ಕಾರದ ಖಾತೆಗೆ ಹಣ ಮರು ಜಮಾ ಮಾಡಬೇಕು ಅಥವಾ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.