ಬೆಂಗಳೂರು: ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ಆರೋಪಿ ಜಾಫರ್ ಸಾದಿಕ್ ಜಾಮೀನು ಅರ್ಜಿಯನ್ನು ಎನ್ಐಎ ಕೋರ್ಟ್ ವಜಾಗೊಳಿಸಲಾಗಿದೆ.
ಬಜರಂಗದಳದ ಕಾರ್ಯಕರ್ತ ಎಂಬ ಕಾರಣಕ್ಕೆ ಹರ್ಷನನ್ನು ಹತ್ಯೆ ಮಾಡಲಾಗಿದೆ. ಆತನ ಮೇಲೆ ವೈಯಕ್ತಿಕ ದ್ವೇಷ ಇಲ್ಲದಿದ್ದರೂ ಹತ್ಯೆ ಮಾಡಲಾಗಿದೆ. ಜಾಫರ್ ಆರನೇ ಆರೋಪಿಯ ತಂದೆ. ಸಂಚಿನಲ್ಲಿ ಭಾಗಿಯಾಗಿದ್ದ. ಕೊಲೆಗೆ ಸ್ವಿಫ್ಟ್ ಕಾರ್ ನೀಡಿದ್ದ. ಸಿಸಿಟಿವಿ ದೃಶ್ಯಾವಳಿ ದೊರೆತಿದೆ. ಪರಾರಿಯಾಗಲು ಐ10 ಕಾರ್ ನೀಡಿ ನೆರವಾಗಿದ್ದು, ಈಗಾಗಲೇ ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದಾನೆ. ಈತನಿಗೆ ಜಾಮೀನು ನೀಡಿದರೆ ತನಿಖೆಗೆ ಹಿನ್ನಡೆಯಾಗುತ್ತದೆ ಎಂದು ಎನ್ಐಎ ಪರವಾಗಿ ಎಸ್.ಪಿ.ಪಿ. ಪ್ರಸನ್ನಕುಮಾರ್ ವಾದ ಮಂಡಿಸಿದ್ದು, ವಾದವನ್ನು ಪರಿಗಣಿಸಿ ಎನ್ಐಎ ಕೋರ್ಟ್ ಜಾಮೀನು ನಿರಾಕರಿಸಿದೆ.