ಆರ್ಪಿಜಿ ಎಂಟರ್ಪ್ರೈಸಸ್ ಅಧ್ಯಕ್ಷ ಹರ್ಷ್ ಗೋಯೆಂಕಾ ಅವರು ಜಾಲತಾಣದಲ್ಲಿ ಸಕ್ರಿಯ. ಆಸಕ್ತಿಕರ ವಿಷಯಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ ಅವರು ರುಮಾಲಿ ರೋಟಿಯ ವಿಡಿಯೋ ಶೇರ್ ಮಾಡಿದ್ದು, ಅದು ಸಾಕಷ್ಟು ಆಸಕ್ತಿದಾಯಕ ಎನಿಸಿದೆ.
ಉದ್ದನೆಯ ಸಿಲಿಂಡರಾಕಾರದ ಪ್ಯಾನ್ನಲ್ಲಿ ವ್ಯಕ್ತಿಯೊಬ್ಬರು ಬೃಹತ್ ರುಮಾಲಿ ರೋಟಿ ತಯಾರಿಸುವ ವಿಡಿಯೊವನ್ನು ಅವರು ತಮಾಷೆಯ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದಾರೆ. ಅದು ಆನ್ಲೈನ್ನಲ್ಲಿ ವೈರಲ್ ಆಗಿದೆ.
“ನನ್ನನ್ನು ತೂಕ ಇಳಿಸಿಕೊಳ್ಳಲು ಮತ್ತು ಒಂದೇ ಒಂದು ರೋಟಿ ತಿನ್ನಲು ಈಗ ನಾನು ಅವನನ್ನು ಹುಡುಕುತ್ತಿದ್ದೇನೆ”ಎಂದು ಹರ್ಷ್ ಗೋಯೆಂಕಾ ಪೋಸ್ಟ್ಗೆ ಶೀರ್ಷಿಕೆ ನೀಡಿದ್ದಾರೆ.
ಆನ್ಲೈನ್ನಲ್ಲಿ ಹಂಚಿಕೊಂಡ ನಂತರ, ವಿಡಿಯೋ ಸುಮಾರು 1.7 ಲಕ್ಷ ವೀಕ್ಷಣೆ ಗಳಿಸಿದೆ. ನೂರಾರು ಮಂದಿ ಕಾಮೆಂಟ್ಗಳ ವಿಭಾಗದಲ್ಲಿ ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಿದ್ದಾರೆ.