ನೀವು ಊಟ ಮಾಡ್ಬೇಕು ಅಂತ ಅಲ್ಲಿಗೆ ಒಮ್ಮೆ ಭೇಟಿ ಕೊಟ್ರೆ, ಹೋಟೆಲ್ ಗೆ ಬಂದಿದ್ದೀವೋ? ಅಥವಾ ಜೈಲಿಗೆ ಬಂದಿದ್ದೀವೋ ಅನ್ನೋ ಅನುಮಾನ ಮೂಡುತ್ತೆ. ಇದಕ್ಕೆ ಕಾರಣ ಹೋಟೆಲ್ ನ ರೂಪ. ಹೋಟೆಲ್ ಒಳಗೆ ಕಾಲಿಟಿದ್ರೆ ಕಣ್ಣಿಗೆ ಕಾಣೋದು ಜೈಲ್ ನಂತಹ ದೃಶ್ಯ.
RPG ಅಧ್ಯಕ್ಷ ಹರ್ಷ್ ಗೋಯೆಂಕಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋ ಬೆಂಗಳೂರಿನಲ್ಲಿರುವ ವಿಭಿನ್ನ ಹೋಟೆಲ್ ಬಗ್ಗೆ ತಿಳಿಸಿದೆ.
ಕ್ಲಿಪ್‌ನಲ್ಲಿ ಓರ್ವ ವ್ಯಕ್ತಿ ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಸೆಂಟ್ರಲ್ ಜೈಲ್ ರೆಸ್ಟೋರೆಂಟ್ ಅನ್ನು ತೋರಿಸುತ್ತಿರುವುದನ್ನು ಕಾಣಬಹುದು. ಇಡೀ ಉಪಾಹಾರ ಗೃಹವನ್ನು ಜೈಲಿನಂತೆ ವಿನ್ಯಾಸಗೊಳಿಸಿದ್ದು ಸೆಲ್‌ಗಳನ್ನು ಸಹ ನಿರ್ಮಾಣ ಮಾಡಲಾಗಿದೆ.
ಕೈದಿಗಳಂತೆ ಪಟ್ಟೆಯುಳ್ಳ ಬಿಳಿ ಉಡುಪಿನಲ್ಲಿ ವೇಟರ್ ಆಹಾರ ಬಡಿಸಿದ್ರೆ, ಪೊಲೀಸ್ ಡ್ರೆಸ್ ನಲ್ಲಿರುವವರು ಆಹಾರದ ಆರ್ಡರ್ ತೆಗೆದುಕೊಳ್ಳುತ್ತಾರೆ.
ಈ ವಿಭಿನ್ನ ಪರಿಕಲ್ಪನೆಯ ರೆಸ್ಟೋರೆಂಟ್ ವಿಡಿಯೋನ ಹಲವರು ವೀಕ್ಷಿಸಿದ್ದು ಇಲ್ಲಿ ಊಟ ಮಾಡಿದ ನೀವೇನಾದ್ರೂ ಬಿಲ್ ಪಾವತಿಸದಿದ್ದರೆ ನೀವು ಜೈಲಿಗೆ ಹೋಗುವುದಿಲ್ಲ; ಏಕೆಂದರೆ ನೀವು ಈಗಾಗಲೇ ಜೈಲಿನಲ್ಲಿದ್ದೀರಿ ಎಂದು ತಮಾಷೆ ಮಾಡಿದ್ದಾರೆ.