ಉದ್ಯಮಿ ಹರ್ಷ್ ಗೋಯೆಂಕಾ ಅವರು ಸಾಕಷ್ಟು ಅತ್ಯಾಸಕ್ತಿಯ ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಆಗಸ್ಟ್ 20ರಂದು ಅವರು ಮದುವೆ ಆಹ್ವಾನ ಪತ್ರಿಕೆಯನ್ನು ಪೋಸ್ಟ್ ಮಾಡಿದ್ದು, ನೆಟ್ಟಿಗರ ಗಮನ ಸೆಳೆಯುವಂತೆ ಮಾಡಿದ್ದಾರೆ.
ಅದು ಫಾರ್ಮಸಿಸ್ಟ್ ಒಬ್ಬರ ಮದುವೆಯ ಆಮಂತ್ರಣ ಪತ್ರಿಕೆಯಾಗಿದೆ. ಅದು ಸಾಕಷ್ಟು ಹೊಸತನದಿಂದ ಕೂಡಿದ್ದು, ಕ್ರಿಯಾಶೀಲತೆ ಮೆಚ್ಚುವಂತಿದೆ.
ಆ ವ್ಯಕ್ತಿ ಮದುವೆ ಆಮಂತ್ರಣವನ್ನು ಟ್ಯಾಬ್ಲೆಟ್ಗಳ ಪ್ಯಾಕ್ನ ಹಿಂಭಾಗದಂತೆ ಕಾಣುವ ರೀತಿಯಲ್ಲಿ ವಿನ್ಯಾಸಗೊಳಿಸಿದ್ದರು. ಸೂಚನೆಗಳು ಮತ್ತು ಸಲಹೆಗಳ ಬದಲಿಗೆ, ಪಟ್ಟಿಯು ಮದುವೆಯ ದಿನಾಂಕ, ಸಮಯ ಮತ್ತು ವಧು ಮತ್ತು ವರನ ಹೆಸರನ್ನು ಹೊಂದಿತ್ತು. ಮದುವೆಯ ದಿನಾಂಕವು ಸೆಪ್ಟೆಂಬರ್ 5 ಆಗಿದ್ದರೆ, ವರ ಮತ್ತು ವಧು ಕ್ರಮವಾಗಿ ಎಜಿಲರಸನ್ ಮತ್ತು ವಸಂತಕುಮಾರಿ ಎಂಬ ಹೆಸರಿನಲ್ಲಿದೆ. ಹಾಗೆಯೇ ಇಬ್ಬರ ವಿದ್ಯಾರ್ಹತೆಯನ್ನೂ ಒಳಗೊಂಡಿತ್ತು.
ಮಾತ್ರೆ ಕವರ್ ಹಿಂಭಾಗ ಇರುವ ವಾರ್ನಿಂಗ್ ಸೆಕ್ಷನ್ ಇಲ್ಲೂ ಇದ್ದು, ಅದರಲ್ಲಿ “ಎಲ್ಲಾ ಸ್ನೇಹಿತರು ಮತ್ತು ಸಂಬಂಧಿಕರು ನನ್ನ ಮದುವೆ ಕಾರ್ಯಕ್ರಮವನ್ನು ತಪ್ಪಿಸಿಕೊಳ್ಳುವಂತಿಲ್ಲ ಎಂದಿದೆ.
“ಫಾರ್ಮಸಿಸ್ಟ್ ಮದುವೆಯ ಆಮಂತ್ರಣ! ಈ ದಿನಗಳಲ್ಲಿ ಜನರು ತುಂಬಾ ಇನ್ನೋವೆಟಿವ್ ಆಗಿದ್ದಾರೆ” ಎಂದು ಹರ್ಷ್ ಗೋಯೆಂಕಾ ಶೀರ್ಷಿಕೆಯಲ್ಲಿ ಬರೆದಿದ್ದಾರೆ.