
ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ‘ಭಾರತದ ನೈಟಿಂಗೇಲ್’ ಲತಾ ಮಂಗೇಶ್ಕರ್ ನಿಧನರಾದಾಗ ಇಡೀ ದೇಶವೇ ಶೋಕದಲ್ಲಿ ಮುಳುಗಿತು. ಅಪ್ರತಿಮ ಗಾಯಕಿ ತನ್ನ ಸುಮಧುರ ಕಂಠದಿಂದ ಚಲನಚಿತ್ರೋದ್ಯಮದಕ್ಕೆ ಒಂದು ಸ್ಥಾನವನ್ನು ನೀಡಿದವರು.
ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಅವರು ದಿವಂಗತ ಗಾಯಕಿಯ ಅಪರೂಪದ ಫೋಟೋವನ್ನು ಟ್ವಿಟ್ನಲ್ಲಿ ಹಂಚಿಕೊಂಡಿದ್ದು, ಅದೀಗ ವೈರಲ್ ಆಗಿದೆ.
ಲತಾ ಮಂಗೇಶ್ಕರ್ ಅವರ ಚಿಕ್ಕ ವಯಸ್ಸಿನ ಅಪರೂಪದ ಚಿತ್ರವನ್ನು ಗೋಯೆಂಕಾ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಲತಾ ಅವರು, ಅಡುಗೆ ಮನೆಯಲ್ಲಿ ತಿಂಡಿ ತಯಾರಿಸುತ್ತಿರುವುದು ಕಂಡುಬಂದಿದೆ.
“ನೈಟಿಂಗೇಲ್’ ಯೌವನದ ದಿನಗಳಲ್ಲಿ ಅಡುಗೆ ಮಾಡುವ ಅಪರೂಪದ ಫೋಟೋ ಇದಾಗಿದೆ. ಲತಾ ದೀದಿ ಕಳುಹಿಸುವ ಮಹಾರಾಷ್ಟ್ರದ ತಿಂಡಿಗಳನ್ನು ನಾವು ಆನಂದಿಸುತ್ತಿದ್ದೆವು ಎಂದು ಗೋಯೆಂಕಾ ಶೀರ್ಷಿಕೆಯಲ್ಲಿ ಬರೆದಿದ್ದಾರೆ.
ಟ್ವೀಟ್ ಅನ್ನು 32 ಸಾವಿರ ಬಾರಿ ವೀಕ್ಷಿಸಲಾಗಿದೆ ಮತ್ತು ಹಲವಾರು ಪ್ರತಿಕ್ರಿಯೆಗಳನ್ನು ಗಳಿಸಿದೆ.