alex Certify ಮೇ 2ಕ್ಕೆ ಬಿಡುಗಡೆಯಾಗಲಿದೆ ಪವನ್ ಕಲ್ಯಾಣ್ ಅಭಿನಯದ ‘ಹರಿಹರ ವೀರ ಮಲ್ಲು’ ಟೀಸರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೇ 2ಕ್ಕೆ ಬಿಡುಗಡೆಯಾಗಲಿದೆ ಪವನ್ ಕಲ್ಯಾಣ್ ಅಭಿನಯದ ‘ಹರಿಹರ ವೀರ ಮಲ್ಲು’ ಟೀಸರ್

Harihara Veeramallu: పవన్ సినిమా టీజర్ వచ్చేస్తోంది? | Pawan Kalyan's Harihara Veeramallu Movie Teaser is getting ready

ಪವರ್ ಸ್ಟಾರ್ ಪವನ್ ಕಲ್ಯಾಣ್ ಪ್ಯಾನ್ ಇಂಡಿಯಾ ಚಿತ್ರ ‘ಹರಿಹರ ವೀರ ಮಲ್ಲು’ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಇದರ ಟೀಸರ್ ಇದೆ ಮೇ 2ಕ್ಕೆ ಬೆಳಿಗ್ಗೆ 9:00 ಗಂಟೆಗೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರ ತಂಡ ಇಂದು ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದೆ.

ಕ್ರಿಶ್ ಜಗರ್ಲಾಮುಡಿ ರಚಿಸಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ಪವನ್ ಕಲ್ಯಾಣ್ ಸೇರಿದಂತೆ ಭಾಭಿ ಡಿಯೋಲ್, ನಿಧಿ ಅಗರ್ವಾಲ್, ವಿಕ್ರಂ ಜಿತ್, ನೂರಾಫಾತೆಹಿ, ಜಿಶು ಸೆನ್ಗುಪ್ತ, ಮತ್ತು ಪೂಜಿತ ಪೊನ್ನಡ ತೆರೆ ಹಂಚಿಕೊಂಡಿದ್ದಾರೆ.

ಮೇಘ ಸೂರ್ಯ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಎ ದಯಾಕರ್ ರಾವ್ ಮತ್ತು ಏ ಎಂ ರತ್ನಂ ಬಂಡವಾಳ ಹೂಡಿದ್ದಾರೆ. ಎಂಎಂ ಕಿರಾವಾಣಿ ಸಂಗೀತ ಸಂಯೋಜನೆ ನೀಡಿದ್ದು, ಪ್ರವೀಣ್ ಕೆಎಲ್, ಸಂಕಲನವಿದೆ. ತೆಲುಗು ಸೇರಿದಂತೆ ಕನ್ನಡ ತಮಿಳು ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಈ ಸಿನಿಮಾ ತೆರೆ ಮೇಲೆ ಬರಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...