alex Certify ನವರಾತ್ರಿಯ 9 ದಿನ ಈ ಬಣ್ಣದ ಮಾಸ್ಕ್ ಧರಿಸಿ ತಾಯಿ ಕೃಪೆಗೆ ಪಾತ್ರರಾಗಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನವರಾತ್ರಿಯ 9 ದಿನ ಈ ಬಣ್ಣದ ಮಾಸ್ಕ್ ಧರಿಸಿ ತಾಯಿ ಕೃಪೆಗೆ ಪಾತ್ರರಾಗಿ

ಅಕ್ಟೋಬರ್ 7ರಿಂದ ನವರಾತ್ರಿ ಆರಂಭವಾಗ್ತಿದೆ. ನವರಾತ್ರಿಯ ಒಂಬತ್ತು ದಿನಗಳ ಕಾಲ ತಾಯಿ ದುರ್ಗೆ ಪೂಜೆ ನಡೆಯುತ್ತದೆ. ತಾಯಿಗೆ ಇಷ್ಟವಾದ ಬಟ್ಟೆಯನ್ನು 9 ದಿನಗಳ ಕಾಲ ಧರಿಸಿದ್ರೆ,ತಾಯಿ ಆಶೀರ್ವಾದ ಪಡೆಯಬಹುದು ಎನ್ನಲಾಗಿದೆ.

ಕೊರೊನಾ ಸಂದರ್ಭದಲ್ಲಿನ ವೈರಸ್ ನಿಂದ ತಪ್ಪಿಸಿಕೊಳ್ಳಲು ಮಾಸ್ಕ್ ಬಹಳ ಮುಖ್ಯ. ಮಾಸ್ಕ್ ಜೀವನದ ಒಂದು ಅಂಗವಾಗಿದೆ. ಮಾಸ್ಕನ್ನು ಬಲವಂತಕ್ಕೆ ಹಾಕಿಕೊಳ್ಳದೆ,ಆನಂದದಿಂದ ಹಾಕಿಕೊಳ್ಳಿ. ನವರಾತ್ರಿ 9 ದಿನಗಳ ಕಾಲ ಬೇರೆ ಬೇರೆ ಬಣ್ಣದ ಮಾಸ್ಕ್ ಧರಿಸಿ.

ಮೊದಲ ದಿನ :  ನವರಾತ್ರಿಯ ಮೊದಲ ದಿನ ಶೈಲ ಪುತ್ರಿಯನ್ನು ಪೂಜಿಸಲಾಗುತ್ತದೆ. ತಾಯಿಗೆ ಹಳದಿ ಬಣ್ಣ ತುಂಬಾ ಇಷ್ಟ. ಅದಕ್ಕಾಗಿಯೇ ಈ ದಿನ ಹಳದಿ ಮಾಸ್ಕ್ ಧರಿಸುವುದು ಒಳ್ಳೆಯದು.

ಕೃತಕ ಹೃದಯ ಹೊಂದಿದ್ದ ವ್ಯಕ್ತಿಗೆ ಮತ್ತೆ ಹೊಸ ಜೀವನ

ಎರಡನೇ ದಿನ : ನವರಾತ್ರಿಯ ಎರಡನೇ ದಿನ ತಾಯಿ ಬ್ರಹ್ಮಚಾರಿಣಿಯನ್ನು ಪೂಜಿಸಲಾಗುತ್ತದೆ.ಬ್ರಹ್ಮಚಾರಿಣಿಗೆ ಹಸಿರು ಬಣ್ಣ ಇಷ್ಟ. ಅದಕ್ಕಾಗಿಯೇ ಈ ದಿನ ಹಸಿರು ಮಾಸ್ಕ್ ಧರಿಸಿ.

ಮೂರನೇ ದಿನ :  ನವರಾತ್ರಿಯ ಮೂರನೇ ದಿನ ಚಂದ್ರಘಂಟಾ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನ ಕಂದು ಬಣ್ಣದ ಬಟ್ಟೆ ಹಾಗೂ ಮಾಸ್ಕ್ ಧರಿಸುವುದರಿಂದ ತಾಯಿಗೆ ಸಂತೋಷವಾಗುತ್ತದೆ.

ನಾಲ್ಕನೇ ದಿನ : ತಾಯಿ ಕೂಷ್ಮಾಂಡಳ ಆರಾಧನೆಯನ್ನು ನವರಾತ್ರಿಯ ನಾಲ್ಕನೇ ದಿನ ಮಾಡಲಾಗುತ್ತದೆ. ತಾಯಿಗೆ ಕಿತ್ತಳೆ ಬಣ್ಣ ತುಂಬಾ ಇಷ್ಟ. ಆದ್ದರಿಂದ ಈ ದಿನ ಕಿತ್ತಳೆ ಮಾಸ್ಕ್ ಧರಿಸಿದ್ರೆ ಮಂಗಳಕರ.

ಆನ್ಲೈನ್ ನಲ್ಲಿ ಸ್ಥಿರ ಠೇವಣಿ ಖಾತೆ ತೆರೆದ್ರೆ ಸಿಗಲಿದೆ ಹೆಚ್ಚಿನ ಬಡ್ಡಿ

ಐದನೇ ದಿನ : ನವರಾತ್ರಿಯ ಐದನೇ ದಿನವನ್ನು ತಾಯಿ ಸ್ಕಂದಮಾತೆಗೆ ಸಮರ್ಪಿಸಲಾಗಿದೆ. ಈ ದಿನ ಆಕೆಯನ್ನು ಪೂಜಿಸಲಾಗುತ್ತದೆ. ಬಿಳಿ ಬಣ್ಣದ ಉಡುಪನ್ನು ಧರಿಸುವುದು ಶುಭಕರ. ಬಿಳಿ ಬಣ್ಣದ ಮಾಸ್ಕ್ ಧರಿಸುವುದು ಶುಭಕರ.

ಆರನೆಯ ದಿನ : ನವರಾತ್ರಿಯ ಆರನೇ ದಿನ ಕಾತ್ಯಾಯಿನಿಯ ಪೂಜೆ ಮಾಡಲಾಗುತ್ತದೆ. ಈ ದಿನ ಕೆಂಪು ಬಣ್ಣದ ಬಟ್ಟೆ ಧರಿಸಬೇಕು. ಈ ಬಣ್ಣವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಆರನೇ ದಿನ ಕೆಂಪು ಬಣ್ಣದ ಮಸ್ಕ್ ಧರಿಸಿ.

ಏಳನೆಯ ದಿನ : ನವರಾತ್ರಿಯ ಏಳನೆಯ ದಿನದಂದು ಕಾಳರಾತ್ರಿಯನ್ನು ಪೂಜಿಸಲಾಗುತ್ತದೆ. ಈ ದಿನ ನೀಲಿ ಬಣ್ಣ ಶ್ರೇಷ್ಠವಾದದ್ದು. ನೀಲಿ ಬಣ್ಣದ ಮಾಸ್ಕ್ ಧರಿಸಬೇಕು.

ವಯಸ್ಸು 88 ಆದರೂ ಯುವಕರನ್ನು ನಾಚಿಸುತ್ತೆ ಈ ವೃದ್ದನ ಆಟ…!

ಎಂಟನೇ ದಿನ : ಮಹಾಗೌರಿ ರೂಪದಲ್ಲಿ ತಾಯಿ ದುರ್ಗೆಯನ್ನು ಈ ದಿನ ಪೂಜೆ ಮಾಡಲಾಗುತ್ತದೆ. ಎಂಟನೇ ದಿನ ಗುಲಾಬಿ ಬಣ್ಣ ಶ್ರೇಷ್ಠ. ಈ ದಿನ ಗುಲಾಬಿ ಬಣ್ಣದ ಮಾಸ್ಕ್ ಧರಿಸಿ.

ಒಂಬತ್ತನೆಯ ದಿನ : ಸಿದ್ಧಿದಾರಿಯನ್ನು ನವರಾತ್ರಿಯ ಒಂಬತ್ತನೇ ಮತ್ತು ಕೊನೆಯ ದಿನದಂದು ಪೂಜಿಸಲಾಗುತ್ತದೆ. ಈ ದಿನ ನೇರಳೆ ಬಣ್ಣದ ಬಟ್ಟೆಗಳನ್ನು ಧರಿಸಬೇಕು.ನೇರಳೆ ಬಣ್ಣದ ಮಾಸ್ಕ್ ಧರಿಸಬೇಕು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...