ಮಂಗಳವಾರ ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ-20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಅನ್ನು ಸೋಲಿಸಿದ ನಂತರ ಭಾರತ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರು ಅಭಿಮಾನಿಗೆ ಮ್ಯಾಚ್ ಬಾಲ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.
ಅಭ್ಯಾಸದ ವೇಳೆ ಹಾರ್ದಿಕ್ ಹೊಡೆದ ಬಾಲ್ ಆಕಸ್ಮಿಕವಾಗಿ ಯುವತಿಗೆ ಬಡಿದಿದೆ. ಪಂದ್ಯದ ನಂತರ, ಹಾರ್ದಿಕ್ ಅವರು ಅಭಿಮಾನಿಯನ್ನು ಸ್ವಾಗತಿಸಲು ನಿರ್ಧರಿಸಿದ್ರು. ಹಾಗೂ ಯುವತಿಗೆ ಆಟೋಗ್ರಾಫ್ ಮಾಡಿ ಮ್ಯಾಚ್ ಬಾಲ್ ನೀಡಲು ನಿರ್ಧರಿಸಿದರು. ಯುವ ಅಭಿಮಾನಿಯೆಡೆಗೆ ಹಾರ್ದಿಕ್ ತೋರಿದ ಪ್ರೀತಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನು ಪಂದ್ಯದಲ್ಲಿ ಭಾರತವು ವೆಸ್ಟ್ ಇಂಡೀಸ್ ಅನ್ನು ಏಳು ವಿಕೆಟ್‌ಗಳಿಂದ ಸೋಲಿಸಿ, ಐದು ಪಂದ್ಯಗಳ ಸರಣಿಯಲ್ಲಿ ಹಿನ್ನಡೆಯನ್ನು 1-2ಕ್ಕೆ ತಗ್ಗಿಸಿತು.
ಮೊದಲು ಬ್ಯಾಟಿಂಗ್ ಆರಿಸಿಕೊಂಡ ವೆಸ್ಟ್ ಇಂಡೀಸ್, ಬ್ರಾಂಡನ್ ಕಿಂಗ್ (42) ಮತ್ತು ರೋವ್‌ಮನ್ ಪೊವೆಲ್ (40) ಅವರ ಆಕರ್ಷಕ ರನ್ ಗಳ ನೆರವಿನಿಂದ 20 ಓವರ್‌ಗಳಲ್ಲಿ ಐದು ವಿಕೆಟ್ ಗೆ 159 ರನ್ ಕಲೆ ಹಾಕಿತು. ಭಾರತದ ಪರ ಕುಲದೀಪ್ ಮೂರು ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ ಮತ್ತು ಮುಖೇಶ್ ಕುಮಾರ್ ತಲಾ ಒಂದು ವಿಕೆಟ್ ಪಡೆದರು.
160 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ, ಆರಂಭಿಕರಾದ ಯಶಸ್ವಿ ಜೈಸ್ವಾಲ್ ಮತ್ತು ಶುಭಮನ್ ಗಿಲ್ ಅವರನ್ನು ಮೊದಲ ಐದು ಓವರ್‌ಗಳಲ್ಲಿ ಪೆವಿಲಿಯನ್ ನತ್ತ ಸಾಗುವಂತಾಯ್ತು. ಆದರೆ, ಸೂರ್ಯಕುಮಾರ್ ಯಾದವ್ ಅವರ ಬಿರುಸಿನ 44 ಎಸೆತಗಳಲ್ಲಿ 83 ರನ್ ಮತ್ತು ತಿಲಕ್ ವರ್ಮಾ ಅವರ ಅಜೇಯ 49 ರನ್ ಭಾರತವನ್ನು ಸುಲಭವಾಗಿ ಅಂತಿಮ ಗೆರೆಯನ್ನು ದಾಟಿತು.
ಕೊನೆಯ ಎರಡು ಟಿ-20 ಪಂದ್ಯಗಳು ಕ್ಯಾಲಿಫೋರ್ನಿಯಾದ ಲಾಡರ್‌ಹಿಲ್‌ನಲ್ಲಿ ಕ್ರಮವಾಗಿ ಶನಿವಾರ ಮತ್ತು ಭಾನುವಾರ ನಡೆಯಲಿವೆ.