ತಮ್ಮ ಎರಡನೇ ಮಗುವನ್ನು ಸ್ವಾಗತಿಸಿದ ಕ್ರಿಕೆಟಿಗ ಹರ್ಭಜನ ಸಿಂಗ್ ಹಾಗೂ ನಟಿ ಗೀತಾ ಬಸ್ರಾ ಮಗುವಿಗೆ ಜೋವನ್ ವೀರ್ ಎಂದು ನಾಮಕರಣ ಮಾಡಿದ್ದಾರೆ.
ದಂಪತಿಗಳಿಗೆ ಹಿನಾಯಾ ಎಂಬ ಮಗಳೂ ಇದ್ದಾಳೆ. ಇನ್ಸ್ಟಾಗ್ರಾಂನಲ್ಲಿರುವ ತಮ್ಮ ಖಾತೆಯಲ್ಲಿ ಮಗುವಿನೊಂದಿಗಿರುವ ಫೋಟೋ ಕೊಲಾಜ್ ಒಂದನ್ನು ಮಾಡಿ ಶೇರ್ ಮಾಡಿಕೊಂಡಿದ್ದಾರೆ ಗೀತಾ ಬಸ್ರಾ.
2ನೇ ಬಾರಿ ಗಂಡು ಮಗುವಿಗೆ ಜನ್ಮ ನೀಡಿದ ಬಾಲಿವುಡ್ ಬೆಬೋ; ಮತ್ತೊಂದು ಮಗುವನ್ನು ಸ್ವಾಗತಿಸಿದ ಸೈಫ್ ಕುಟುಂಬ
“ಒಂಬತ್ತು ತಿಂಗಳ ಕಾಲ ಒಳಗಿಂದಲೇ ಪೋಷಿಸಿದ ಮಗುವೊಂದಿಗೆ ಜೀವಮಾನ ಪ್ರೀತಿಯಲ್ಲಿ ಬೀಳುತ್ತಿದ್ದೇನೆ” ಎಂದು ಕ್ಯಾಪ್ಷನ್ ಕೊಟ್ಟಿರುವ ಬಸ್ರಾರ ಪ್ರೊಫೈಲ್ನ ಕಾಮೆಂಟ್ ಸೆಕ್ಷನ್ನಲ್ಲಿ ಅವರ ಅನುಯಾಯಿಗಳು ಕಾಮೆಂಟ್ಗಳ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
https://www.instagram.com/p/CTJovOJs8r2/?utm_source=ig_embed&ig_rid=b8d8a568-35fd-4260-ad2d-3690f673f112