ಬೆಂಗಳೂರು: ಎಂಎಸ್ಐಎಲ್ ಔಷಧ ಮಳಿಗೆಗಳನ್ನು ರಾಜ್ಯದಾದ್ಯಂತ ಪ್ರತ್ಯೇಕವಾಗಿ ತೆರೆಯಲು ತೀರ್ಮಾನಿಸಲಾಗಿದೆ ಎಂದು ಶಾಸಕ ಹಾಗೂ ಸಂಸ್ಥೆಯ ಅಧ್ಯಕ್ಷ ಹರತಾಳು ಹಾಲಪ್ಪ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ 87 ಜನೌಷಧ ಮಳಿಗೆಗಳನ್ನು ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಂಎಸ್ಐಎಲ್ ನಿಂದಲೇ ಪ್ರತ್ಯೇಕವಾಗಿ ಔಷಧ ಮಳಿಗೆಗಳನ್ನು ತೆರೆಯಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ 979 ಎಂಎಸ್ಐಎಲ್ ಮದ್ಯ ಮಳಿಗೆಗಳಿದ್ದು 200 ಮಳಿಗೆಗಳ ನವೀಕರಣ ಮಾಡಲಾಗುವುದು. ಉಳಿದ ಜಿಲ್ಲೆಗಳು ಹಾಗೂ ತಾಲೂಕು ಕೇಂದ್ರಗಳಲ್ಲಿಯೂ ಎಂಎಸ್ಐಎಲ್ ಚಿಟ್ ಫಂಡ್ ಆರಂಭಿಸಲಾಗುವುದು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ 57 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದರು.