ಬೆಂಗಳೂರು: ಪತಿ ಜೊತೆಗೆ ಹೋಗುತ್ತಿದ್ದ ಮಹಿಳೆಗೆ ಪುಂಡರು ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಂಗಳೂರಿನ ಕೊಡುಗೆಹಳ್ಳಿಯ ವಿರೂಪಾಕ್ಷಪುರದಲ್ಲಿ ನಡೆದಿದೆ.
ನಿನ್ನೆ ರಾತ್ರಿ 10.30ರಲ್ಲಿ ಬಿಹಾರ ಮೂಲದ ದಂಪತಿಗೆ ಕಿರುಕುಳ ನೀಡಲಾಗಿದೆ. ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಮೂವರು ಪುಂಡರು ಕಿರುಕುಳ ನೀಡಿದ್ದಾರೆ. ಒಪ್ಪದಿದ್ದಾಗ ಅಪಹರಣ ಮಾಡುವುದಾಗಿ ಮಹಿಳೆಯನ್ನು ಬೆದರಿಸಿದ್ದಾರೆ. ಬಿಹಾರ ಮೂಲದ ದಂಪತಿಯನ್ನು ಪುಂಡರ ತಂಡ ನಿನ್ನೆ ರಾತ್ರಿ ಅಟ್ಟಾಡಿಸಿದೆ. ಪತ್ನಿಯನ್ನು ಕಳುಹಿಸುವಂತೆ ಪುಂಡರು ಪತಿಗೆ ಬೆದರಿಕೆ ಹಾಕಿದ್ದಾರೆ.
ಸಹಾಯ ಕೋರಿದ ದಂಪತಿ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದಾರೆ. ನಂತರ ಬಿಹಾರ ಪೊಲೀಸರಿಗೂ ದಂಪತಿ ಕರೆ ಮಾಡಿದ್ದಾರೆ. ಕಿರುಕುಳದ ಬಗ್ಗೆ ಬೆಂಗಳೂರು ಪೊಲೀಸ್ ಸಹಾಯವಾಣಿಗೆ ಕರೆ ಮಾಡಲಾಗಿದೆ. ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.