ಬೆಂಗಳೂರು: ಸೆಕ್ಸ್ ಬಗ್ಗೆ ಹೇಳಿಕೊಡುವುದಾಗಿ ಸೊಸೆಗೆ ಪೀಡಿಸುತ್ತಿದ್ದ ಮಾವನ ವಿರುದ್ಧ ಮಹಿಳೆ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬೆಂಗಳೂರಿನ ತಿಲಕ್ ನಗರದ 24 ವರ್ಷದ ಸಂತ್ರಸ್ತೆ ದೂರು ನೀಡಿದ್ದು, ಎಸ್.ಜಿ. ಪಾಳ್ಯದ ವೆಂಕಟೇಶ್(63) ಎಂಬುವನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. 2015 ರಲ್ಲಿ ಮಹಿಳೆಗೆ ಮದುವೆಯಾಗಿದ್ದು, 6 ವರ್ಷದ ಮಗನಿದ್ದಾನೆ. ಮೂರು ತಿಂಗಳ ಹಿಂದೆ ಹೃದಯಾಘಾತದಿಂದ ಪತಿ ಮೃತಪಟ್ಟಿದ್ದು, ನಂತರ ಮಾವ ಲೈಂಗಿಕ ಕಿರುಕುಳ ನೀಡುತ್ತಿರುವುದಾಗಿ ಮಹಿಳೆ ಆರೋಪಿಸಿದ್ದಾರೆ.
ನಿನಗೆ ಲೈಂಗಿಕ ಕ್ರಿಯೆ ಬಗ್ಗೆ ಗೊತ್ತಿಲ್ಲದಿದ್ದರೆ ನನ್ನ ಬಳಿ ಬಾ ಹೇಳಿಕೊಡುತ್ತೇನೆ ಎಂದು ಹೇಳುವ ಮಾವ ಸ್ನಾನ ಮಾಡುವಾಗ ಕದ್ದು ನೋಡುತ್ತಾರೆ. ನಿನ್ನ ಗಂಡ ಮೃತಪಟ್ಟಿದ್ದು, ನನ್ನೊಂದಿಗೆ ಅನುಸರಿಸಿಕೊಂಡು ಹೋದರೆ ಎಲ್ಲ ರೀತಿಯಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತೇನೆ. ಇಲ್ಲದಿದ್ದರೆ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿರುವುದಾಗಿ ಮಹಿಳೆ ದೂರು ನೀಡಿದ್ದಾರೆನ್ನಲಾಗಿದೆ.