ಬೆಂಗಳೂರು ಹೊಸ ವರ್ಷದ ಸಂಭ್ರಮಾಚರಣೆಯ ದಿನ ಪಬ್ ವೊಂದರಲ್ಲಿ ಸಿಗರೇಟ್ ಪ್ರಮೋಷನ್ ಮಾಡುತ್ತಿದ್ದ ಮಹಿಳಾ ಸಹೋದ್ಯೋಗಿಗೆ ಬಲವಂತವಾಗಿ ಮದ್ಯ ಕುಡಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಮೂವರ ವಿರುದ್ಧ ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
22 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಖಾಸಗಿ ಕಂಪನಿ ಮ್ಯಾನೇಜರ್ ಗಳಾದ ಹೇಮಂತ್, ಪುನೀತ್, ಅಜಿತ್ ಅವರ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಸಿಗರೇಟ್ ಪ್ರಮೋಷನ್ ಕೆಲಸ ಮಾಡುತ್ತಿದ್ದ ಸಂತ್ರಸ್ತೆ ಡಿಸೆಂಬರ್ 31 ರಂದು ರಾತ್ರಿ ಬ್ರಿಗೇಡ್ ರಸ್ತೆಯ ಪಬ್ ವೊಂದರಲ್ಲಿ ಈ ಮೂವರು ಹಾಗೂ ಇತರರ ಜೊತೆಗೆ ಸಿಗರೇಟ್ ಪ್ರಮೋಷನ್ ಮಾಡುತ್ತಿದ್ದರು. ಹೇಮಂತ್ ಆಕೆಗೆ ಬಲವಂತವಾಗಿ ಮದ್ಯ ಕುಡಿಸಿ ಮದ್ಯದ ನಶೆಯಲ್ಲಿದ್ದಾಗ ಮೈಕೈಮುಟ್ಟಿ ಕಿರುಕುಳ ನೀಡಿದ್ದಾನೆ. ನಂತರ ಾಕೆಯನ್ನು ಕಾರ್ ನಲ್ಲಿ ಕೂರಿಸಿಕೊಂಡು ತಡರಾತ್ರಿವರೆಗೂ ಸುತ್ತಾಡಿಸಿ ರಸ್ತೆಯಲ್ಲೇ ಬಿಟ್ಟು ಹೋಗಿದ್ದಾರೆ. ಬಳಿಕ ತಾಯಿಗೆ ಕರೆ ಮಾಡಿ ಕರೆಸಿಕೊಂಡು ಮನೆಗೆ ಹೋಗಿದ್ದಾರೆ.