ಮಂಗಳೂರು: ಬ್ಯಾಂಕ್ ಸಾಲ ಪಾವತಿ ಕಿರುಕುಳ ತಾಳದೆ ವ್ಯಕ್ತಿಯೊಬ್ಬರು ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಖಾಸಗಿ ಬ್ಯಾಂಕ್ ಅಧ್ಯಕ್ಷರನ್ನು ಪೊಲೀಸರು ಬಂಧಿಸಿದ್ದಾರೆ.
ಉಳಾಯಿಬೆಟ್ಟು ಕುಟಿನೊಪದವು ನಿವಾಸಿ ಮನೋಹರ್ ಪಿರೇರಾ(47) ಮಂಗಳವಾರ ವಿಡಿಯೋ ಮಾಡಿ ವಾಟ್ಸಾಪ್ ಗ್ರೂಪ್ ನಲ್ಲಿ ಹಾಕಿ ನಂತರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 10 ವರ್ಷದ ಹಿಂದೆ ಮನೆ ಖರೀದಿಗೆ ಮನೋಹರ್ ಖಾಸಗಿ ಬ್ಯಾಂಕ್ ನಿಂದ ಸಾಲ ಪಡೆದಿದ್ದರು. ಕೊರೋನಾ ನಂತರ ಸಾಲ ಪಾವತಿಸದ ಕಾರಣ ಮನೆಯನ್ನು ಬ್ಯಾಂಕ್ ಜಪ್ತಿ ಮಾಡಿತ್ತು ಎನ್ನಲಾಗಿದೆ.
ಬಳಿಕ ಮನೋಹರ 15 ಲಕ್ಷ ರೂ. ಹಣ ಪಾವತಿಸಿದ್ದರು. ಈ ಹಣವನ್ನು ಸಾಲಕ್ಕೆ ಜಮಾ ಮಾಡದೇ ಅಧ್ಯಕ್ಷರು ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ಮನೋಹರ ಆರೋಪಿಸಿದ್ದರು. ಈ ಹಿನ್ನಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.