
ಮೇಲಧಿಕಾರಿಗಳ ಕಿರುಕುಳಕ್ಕೆ ಕ್ಲರ್ಕ್ ಓರ್ವ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಪಿನಾಯಿಲ್ ಸೇವಿಸಿ ಕ್ಲರ್ಕ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಸುಲೋಮನ್ ಆತ್ಮಹತ್ಯೆಗೆ ಯತ್ನಿಸಿರುವ ಕ್ಲರ್ಕ್. ಅನುಕಂಪದ ಆಧಾರದಲ್ಲಿ ನೌಕರಿಗೆ ಸೇರಿದ್ದ ಸುಲೋಮನ್ ಮೇಲಧಿಕಾರಿಗಳ ಕಿರುಕುಳದಿಂದ ನೊಂದಿದ್ದರು ಎನ್ನಲಾಗಿದೆ.
ಕೋವಿಡ್ ನಿಂದ ತಂದೆ ಸಾವನ್ನಪ್ಪಿದ ಬಳಿಕ ಸುಲೋಮನ್ ನೌಕರಿಗೆ ಸೆರಿದ್ದರು. ಎರಡುವರೆ ವರ್ಷದಿಂದ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು. ಕೆಲಸದ ಒತ್ತಡದ ಜೊತೆಗೆ ರಜೆ ಕೊಡದ ಕಾರಣಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದರು. ತೀವ್ರವಾಗಿ ಅಸ್ವಸ್ಥರಾಗಿದ್ದ ಅವರನ್ನು ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.