
ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಯುವಕರ ಪುಂಡಾಟ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಲಿಸುತ್ತಿರುವ ಕಾರಿನಲ್ಲಿ ಯುವಕರು ಮೋಜು ಮಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಕಾರು ಮಾಲೀಕನಿಗೆ ದಂಡ ವಿಧಿಸಲಾಗಿದೆ.
ನಿಶಾಂತ ಶರ್ಮಾ ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಪಿಲ್ಖಾವಾ ಕೊಟ್ವಾಲಿ ಪ್ರದೇಶದ ಹೆದ್ದಾರಿಯಲ್ಲಿ ನಾಲ್ಕೈದು ಹುಡುಗರು, ಕಾರಿನ ಕಿಟಕಿ ಹಾಗೂ ಸನ್ ರೂಫ್ ನಿಂದ ಹೊರಗೆ ಬಂದು ಚೀರುತ್ತ ಹೋಗ್ತಿದ್ದಾರೆ. ಅವರನ್ನು ಸಂಚಾರಿ ಪೊಲೀಸರು ಗಮನಿಸಲಿಲ್ಲ ಎಂಬ ಪೋಸ್ಟ್ ಹಾಕಲಾಗಿತ್ತು.
ಈ ವಿಡಿಯೋ ವೈರಲ್ ಆಗ್ತಿದ್ದಂತೆ ಟ್ರಾಫಿಕ್ ಪೊಲೀಸರು ಕ್ರಮಕೈಗೊಂಡಿದ್ದಾರೆ. ಕಾರು ಮಾಲೀಕನಿಗೆ ದಂಡ ವಿಧಿಸಿದ್ದಾರೆ. ಕಾರು ಮಾಲೀಕನಿಗೆ, ಸಂಚಾರಿ ನಿಯಮ ಮೀರಿದ ಹಿನ್ನೆಲೆಯಲ್ಲಿ 14 ಸಾವಿರ ರೂಪಾಯಿ ದಂಡ ವಿಧಿಸಿರೋದಾಗಿ ಟ್ರಾಫಿಕ್ ಪೊಲೀಸರು ಹೇಳಿದ್ದಾರೆ.
ನಿಶಾಂತ್ ಶರ್ಮಾ ವಿಡಿಯೋಕ್ಕೆ, ದಂಡದ ರಶೀದಿ ಟ್ಯಾಗ್ ಮಾಡಿದ ಪೊಲೀಸರು, ದಂಡ ವಿಧಿಸಿರುವ ಮಾಹಿತಿ ನೀಡಿದ್ದಾರೆ.