“ನಮಗೆ ಇದಕ್ಕೆಂದೇ ತರಬೇತಿ ಕೊಟ್ಟಿರುತ್ತಾರೆ. ಇದೊಂದು ದೊಡ್ಡ ಕೆಲಸವೇನಲ್ಲ,” ಎಂದು ಹೇಳುತ್ತಾರೆ ಲೆಫ್ಟಿನೆಂಟ್ ಕರ್ನಲ್ ಹೇಮಂತ್ ರಾಜ್. ಕೇರಳದ ಟ್ರೆಕ್ಕರ್ ಚೆರಟ್ಟಿಲ್ ಬಾಬುರನ್ನು ರಕ್ಷಿಸಲೆಂದು 75 ಮಂದಿಯ ತಂಡವನ್ನು ಮುನ್ನಡೆಸಿದ ಹೇಮಂತ್ ಪಾಲಕ್ಕಾಡ್ ಆಸ್ಪತ್ರೆಯೊಂದರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೀಗೆ ಹೇಳಿದ್ದಾರೆ.
23-ವರ್ಷದ ಬಾಬು ಸದ್ಯಕ್ಕೆ ಚೇತರಿಸಿಕೊಳ್ಳುತ್ತಿದ್ದಾರೆ. “ಆತ ಚೆನ್ನಾಗಿದ್ದಾನೆ,” ಎನ್ನುವ ಹೇಮಂತ್, “ಬಾಬು ಒಬ್ಬ ಆಶಾವಾದಿ. ನಾವು ಆತನೊಂದಿಗೆ ಮೊದಲ ಬಾರಿಗೆ ಸಂಪರ್ಕ ಸಾಧಿಸಿದಾಗ, ಆತ ನಮ್ಮೊಂದಿಗೆ ಸೌಮ್ಯವಾಗಿ ನಡೆದುಕೊಂಡ. ಒಮ್ಮೆ ಬಿಸ್ಕೆಟ್ ಮತ್ತು ನೀರು ಸೇವಿಸಿದ ಬಳಿಕ ಆತ ನಮ್ಮೆಲ್ಲರಿಗೂ ಮುತ್ತಿಕ್ಕಿದ,” ಎನ್ನುತ್ತಾರೆ.
ಇಟಲಿ ಮಕ್ಕಳಿಗೆ ಬ್ಯಾಸ್ಕೆಟ್ ಬಾಲ್ ಕೋಚಿಂಗ್ ಮಾಡುತ್ತಿದ್ದಾರೆ ಅರ್ಜೆಂಟೀನಾದ ಪ್ಯಾರಾ ಅಥ್ಲೀಟ್
ತನ್ನ ಸ್ನೇಹಿತರೊಂದಿಗೆ ಟ್ರೆಕ್ಕಿಂಗ್ ಮಾಡಲು ತೆರಳಿದ್ದ ಬಾಬು, ಪಾಲಕ್ಕಾಡ್ ಜಿಲ್ಲೆಯ ಕುರುಂಬಾಚಿ ಗುಡ್ಡದ ಮೇಲೆ 1000-ಮೀ ಟ್ರೆಕ್ಕಿಂಗ್ ಮಾಡುತ್ತಿದ್ದ ವೇಳೆ ಜಾರಿ ಬಿದ್ದು ಪ್ರಪಾತವೊಂದರಲ್ಲಿ ಅನ್ನಾಹಾರ ಇಲ್ಲದೇ 45 ಗಂಟೆಗಳ ಕಾಲ ಕಳೆದಿದ್ದಾರೆ.
ತನ್ನನ್ನು ರಕ್ಷಿಸಿದ ಮಂದಿಯನ್ನು ಮುತ್ತಿಕ್ಕುತ್ತಿರುವ ಬಾಬುರ ಚಿತ್ರಗಳು ವೈರಲ್ ಆಗಿದೆ. ಈ ರಕ್ಷಣಾ ಕಾರ್ಯಾಚರಣೆಯಲ್ಲಿ ತಮಗಾದ ಅತ್ಯುತ್ತಮ ಅನುಭವವನ್ನು ಹೇಳಿಕೊಂಡ ಹೇಮಂತ್ ರಾಜ್, “ತಾನು ಭಾರತೀಯ ಸೇನೆ ಸೇರಬೇಕೆಂದು ಬಾಬು ಹೇಳಿದಾಗ ನನ್ನ ಹೃದಯ ಹೆಮ್ಮೆಯಿಂದ ಬೀಗಿತು. ಆತ ಹಾಗೆ ಅಂದಿದ್ದು ನಾವು ಹಾಕಿದ ಶ್ರಮವನ್ನೆಲ್ಲಾ ಸಾರ್ಥಕ ಆಗುವಂತೆ ಮಾಡಿತು,” ಎಂದಿದ್ದಾರೆ.
ಸೇನೆಯ ಪರ್ವತಾರೋಹಿಗಳ ತಂಡ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿಯನ್ನು ಈ ರಕ್ಷಣ ಕಾರ್ಯಾಚರಣೆಯಲ್ಲಿ ಮುನ್ನಡೆಸಿದ್ದಾರೆ. ಇದಕ್ಕೂ ಮುನ್ನ ಅಗ್ನಿಶಾಮಕ ದಳ, ನೌಕಾಪಡೆ ಹಾಗೂ ಕೋಸ್ಟ್ ಗಾರ್ಡ್ ಸೇರಿಕೊಂಡು ನಡೆಸಿದ್ದ ರಕ್ಷಣಾ ಕಾರ್ಯಾಚರಣೆ ಫಲ ಕೊಟ್ಟಿರಲಿಲ್ಲ.