
ಅಂದಹಾಗೆ ಈ ವಿಷಯ ಹೇಳೋದಕ್ಕೆ ಕಾರಣ ಕೂಡ ಇದೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಮುಖ್ಯಮಂತ್ರಿ ಮುರಾದ್ ಅಲಿ ಶಾ ಸೋಶಿಯಲ್ ಮೀಡಿಯಾದಲ್ಲಿ ದೀಪಾವಳಿಗೆ ಶುಭಾಶಯ ಕೋರುವ ಭರದಲ್ಲಿ ಪೇಚಿಗೆ ಸಿಲುಕಿದ್ದಾರೆ.
ಹಬ್ಬಕ್ಕೆ ಶುಭಾಶಯ ಕೋರಿದ್ದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ದೀಪಾವಳಿ ಹಬ್ಬದ ಶುಭಾಶಯ ಕೋರುವ ಬದಲು ಮುರಾದ್ ಹೋಳಿ ಹಬ್ಬದ ಶುಭಾಶಯ ಕೋರಿದ್ದಾರೆ. ಈ ಎರಡೂ ಹಬ್ಬಕ್ಕೆ ಯಾವುದೇ ರೀತಿಯ ಸಾಮ್ಯತೆ ಇಲ್ಲ. ಆದರೂ ಹೋಳಿ ಹಾಗೂ ದೀಪಾವಳಿ ಹಬ್ಬವನ್ನು ಗೊಂದಲ ಮಾಡಿಕೊಂಡ ಮುರಾದ್ ಅಲಿ ಶಾ ಟ್ರೋಲಿಗರ ಕೈಗೆ ಸಿಲುಕಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮುರಾದ್ ಅಲಿ ಶಾ ಮಾಡಿದ ಈ ತಪ್ಪನ್ನು ಹೆಚ್ಚಿನ ಜನರು ಟ್ರೋಲ್ ಮಾಡಿದ್ದಾರೆ.