ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ 11ನೇ ಸೀಸನ್ ನಲ್ಲಿ ಗಾಯಕ ಗುರಿಗಾಹಿ ಹನುಮಂತು ವಿನ್ನರ್ ಆಗಿದ್ದಾರೆ.
ಭಾನುವಾರ ನಡೆದ ಗ್ರಾಂಡ್ ಫಿನಾಲೆಯಲ್ಲಿ ನಟ ಕಿಚ್ಚ ಸುದೀಪ್ ಅವರು ವಿಜೇತರನ್ನು ಘೋಷಣೆ ಮಾಡಿದ್ದಾರೆ. ತ್ರಿವಿಕ್ರಮ್ ರನ್ನರ್ ಅಪ್ ಆಗಿದ್ದು, ದ್ವಿತೀಯ ರನ್ನರ್ ಅಪ್ ಆಗಿ ರಜತ್ ಕಿಶನ್ ಆಯ್ಕೆಯಾಗಿದ್ದಾರೆ. ತೃತೀಯ ರನ್ನರ್ ಅಪ್ ಆಗಿ ಮೋಕ್ಷಿತಾ ಪೈ ಆಯ್ಕೆಯಾಗಿದ್ದಾರೆ.
120 ದಿನಗಳ ಕಾಲ ನಡೆದ ಶೋನಲ್ಲಿ ಹನುಮಂತು ಅವರಿಗೆ ವೀಕ್ಷಕರಿಂದ ವೋಟಿನ ಸುರಿಮಳೆಯಾಗಿತ್ತು. ಸುದೀಪ್ ನಿರುಪಣೆಯ ಕೊನೆಯ ‘ಬಿಗ್ ಬಾಸ್’ ಶೋ ಇದಾಗಿದೆ.