
ಬಾಲಿವುಡ್ ಇರಲೀ ಅಥವಾ ಹಾಲಿವುಡ್ ಇರಲಿ. ಬಿಡುಗಡೆಯಾಗುವ ಚಿತ್ರಗಳಲ್ಲಿ ನಾನಾ ರೀತಿಯ ಜಾನರ್‌ಗಳೆಂಬ ವರ್ಗೀಕರಣ ಇರುತ್ತದೆ. ಬಹುತೇಕ ನಿರ್ದೇಶಕರು ಒಂದು ವಿಧದ ಚಿತ್ರಗಳಿಗೆ ಸೀಮಿತವಾದರೆ ಕೆಲವು ನಿರ್ದೇಶಕರು ಒಂದಕ್ಕೊಂದು ವೈರುಧ್ಯವಾಗಿರುವ ರೀತಿಯ ಚಿತ್ರಗಳನ್ನು ಮಾಡುತ್ತಾರೆ.
’ಒಬ್ಬನೇ ನಿರ್ದೇಶಕ, ಭಿನ್ನವಾದ ಜಾನರ್‌ಗಳು’ ಎಂಬ ಕ್ಯಾಪ್ಷನ್‌ನಲ್ಲಿ ಆರಂಭಗೊಂಡ ಟ್ರೆಂಡ್ ಒಂದರಲ್ಲಿ, ಒಬ್ಬನೇ ನಿರ್ದೇಶಕನಿಂದ ಮೂಡಿ ಬಂದ ಭಿನ್ನ ವಿಧದ ಚಿತ್ರಗಳ ಪೋಸ್ಟರ್‌ಗಳು ಟ್ವಿಟರ್‌ನಲ್ಲಿ ಟ್ರೆಂಡ್ ಆಗುತ್ತಿವೆ.
ಬಾಲಿವುಡ್ ಚಿತ್ರಗಳಾದ ’ಹನುಮಾನ್’ ಹಾಗೂ ’ಗ್ಯಾಂಗ್ಸ್ ಆಫ್ ವಾಸೇಪುರ್’ ಚಿತ್ರಗಳನ್ನು ಒಬ್ಬರೇ ನಿರ್ದೇಶಕರು ಮಾಡಿದ್ದಾರೆ ಎಂದು ಈ ಟ್ವೀಟ್ ಸರಣಿಗಳಿಂದ ಅನೇಕರಿಗೆ ತಿಳಿದು ಬಂದಿದೆ. ಇದೇ ರೀತಿ, ’ಕಂಜೋರಿಂಗ್’ ಮತ್ತು ’ಫ್ಯೂರಿಯಸ್ 7’ ಹೆಸರಿನ ಚಿತ್ರಗಳು ಸಹ ಒಬ್ಬರೇ ನಿರ್ದೇಶಕರಿಂದ ಸೃಷ್ಟಿಯಾಗಿವೆ. ಇದೇ ರೀತಿಯ ಇನ್ನಷ್ಟು ಉದಾಹರಣೆಗಳು ಇಲ್ಲಿವೆ.