ಪ್ರಿಯಕರನ ಜೊತೆಗಿದ್ದ ಪ್ರಿಯತಮೆ ಅನುಮಾನಾಸ್ಪದ ಸಾವು ಕಂಡಿದ್ದಾರೆ. ನೇಣು ಬೀಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಚಿಕ್ಕಬಳ್ಳಾಪುರದ ಬಾಪೂಜಿನಗರದ ನಿವಾಸಿ ಅನುಷಾ ಗುಂತಪ್ಪನಹಳ್ಳಿಯ ಸಮೀಪ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಗರ್ಭಿಣಿ ಅನುಷಾಗೆ ಮೊದಲು ವಿಷ ಕುಡಿಸಿ ಕೊಲೆ ಮಾಡಲು ಪವನ್ ಎಂಬಾತ ಯತ್ನಿಸಿದ್ದಾನೆ. ವಿಷ ಕುಡಿದ ಸ್ಥಿತಿಯಲ್ಲಿ ಹೊಂಗೆ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗರ್ಭಿಣಿ ಅನುಷಾ ಶವ ಪತ್ತೆಯಾಗಿದೆ.
ಗುಂತಪ್ಪನಹಳ್ಳಿಯ ಪವನ್ ನನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.