![](https://kannadadunia.com/wp-content/uploads/2020/03/529758-arvind.jpg)
ನವದೆಹಲಿ: ಕೇಂದ್ರ ತನಿಖಾ ಸಂಸ್ಥೆಗಳು ನನ್ನನ್ನು ಕಳ್ಳ ಎಂದು ಸಾಬೀತುಪಡಿಸಲು ಪ್ರಯತ್ನಿಸುತ್ತಿವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದು, ನನ್ನ ವಿರುದ್ಧ ಒಂದು ಪೈಸೆಯಷ್ಟು ಭ್ರಷ್ಟಾಚಾರ ಕಂಡುಬಂದರೆ ಸಾರ್ವಜನಿಕವಾಗಿ ಗಲ್ಲಿಗೇರಿಸಬಹುದು ಎಂದು ಪ್ರಧಾನಿಗೆ ಹೇಳಿದ್ದಾರೆ.
ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರನ್ನು ಏಪ್ರಿಲ್ 16 ರಂದು ಸಿಬಿಐ ಪ್ರಶ್ನಿಸಿದ್ದು, ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಈಗಾಗಲೇ ಜೈಲಿನಲ್ಲಿದ್ದಾರೆ. ಏಜೆನ್ಸಿ ಕೇಜ್ರಿವಾಲ್ ಅವರನ್ನು ಸಾಕ್ಷಿಯಾಗಿ ಸಮನ್ಸ್ ಮಾಡಿತ್ತು.
ಸಿಬಿಐ, ಇಡಿ, ಆದಾಯ ತೆರಿಗೆ ಮತ್ತು ಪೊಲೀಸರಿಗೆ ಕೇಜ್ರಿವಾಲ್ ಒಬ್ಬ ಕಳ್ಳ ಎಂದು ಸಾಬೀತುಪಡಿಸುವ ಉದ್ದೇಶವಿದೆ. ಕೇಜ್ರಿವಾಲ್ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಸಾಬೀತುಪಡಿಸುವುದು ಅವರ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.
ನಾನು ಮೋದಿಜಿಗೆ ಹೇಳಲು ಬಯಸುತ್ತೇನೆ, ನೀವು ಕೇಜ್ರಿವಾಲ್ ವಿರುದ್ಧ ಒಂದೇ ಒಂದು ಪೈಸೆಯ ಭ್ರಷ್ಟಾಚಾರವನ್ನು ಕಂಡುಕೊಂಡ ದಿನ ನನ್ನನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿ. ನಿಮ್ಮ ನಾಟಕ ನಿಲ್ಲಿಸಿ ಎಂದು ಕೇಜ್ರಿವಾಲ್ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.