ಉಕ್ರೇನ್‌ನಲ್ಲಿ ಯುದ್ಧದ ಭೀಕರತೆ ಮುಂದುವರಿದಿದೆ. ಇತ್ತೀಚೆಗೆ ವಿಡಿಯೋ ತುಣುಕು ವೈರಲ್ ಆಗಿದ್ದು, ಏಪ್ರಿಲ್ 29 ರಂದು ಬುಚಾ ಜಿಲ್ಲೆಯಲ್ಲಿ ರಷ್ಯಾದ ಸೈನಿಕರಿಂದ ಉಕ್ರೇನ್ ನಾಗರಿಕರು ಥಳಿತಕ್ಕೊಳಗಾಗಿ, ತೀವ್ರ ಪೀಡನೆಗೊಳಗಾಗಿದ್ದಾರೆ.
ಉಕ್ರೇನ್‌ನ ಪೊಲೀಸ್ ಮುಖ್ಯಸ್ಥ ಆಂಡ್ರಿ ನಿಬಿಟೊವ್ ಮಾಧ್ಯಮಕ್ಕೆ ನೀಡಿರುವ ಹೇಳಿಕೆ ಪ್ರಕಾರ, ಯುದ್ಧ ಸಂತ್ರಸ್ತರಿಗೆ ಚಿತ್ರಹಿಂಸೆ ನೀಡಲಾಗುತ್ತಿದೆ. ಅವರ ಕೈ ಕಾಲುಗಳಲ್ಲಿ ಗುಂಡಿನ ಗಾಯಗಳು ಕಂಡುಬಂದಿವೆ. ಪ್ರತಿ ಪುರುಷರ ಕೈಕಟ್ಟಿ ಕಿವಿಗೆ ಗುಂಡು ಹಾರಿಸಲಾಗಿದೆ ಎಂದೂ ಹೇಳಿದ್ದಾರೆ.
ಕೈವ್‌ನ ಬುಚಾ ಮತ್ತು ಇತರ ಪಟ್ಟಣಗಳ ಬೀದಿಗಳಲ್ಲಿ ಡಜನ್‌ಗಟ್ಟಲೆ ದೇಹಗಳ ಭಯಾನಕ ಚಿತ್ರ ಈ ತಿಂಗಳ ಆರಂಭದಲ್ಲಿ ಆನ್‌ಲೈನ್‌ನಲ್ಲಿ ಕಾಣಿಸಿತ್ತು. ಉಕ್ರೇನ್ ಮಾಧ್ಯಮ ವರದಿಗಳ ಪ್ರಕಾರ ಬುಚಾದಲ್ಲಿ ನಡೆದ ಸಾಮೂಹಿಕ ಹತ್ಯೆಗಳಲ್ಲಿ ಭಾಗಿಯಾಗಿರುವ ರಷ್ಯಾದ ಸೈನಿಕರ ವಿರುದ್ಧ ಉಕ್ರೇನಿಯನ್ ಅಧಿಕಾರಿಗಳು ಕ್ರಿಮಿನಲ್ ಆರೋಪ ದಾಖಲಿಸಿದ್ದಾರೆ.
ಯುದ್ಧ ಪ್ರಾರಂಭವಾದಾಗಿನಿಂದ 1 ಮಿಲಿಯನ್ ಜನರನ್ನು ಉಕ್ರೇನ್‌ನಿಂದ ಸ್ಥಳಾಂತರಿಸಿದೆ ಎಂದು ರಷ್ಯಾದ ವಿದೇಶಾಂಗ ಸಚಿವರು ಹೇಳಿದ್ದಾರೆ ಎಂದು ನ್ಯೂಸ್ ಏಜೆನ್ಸಿ ವರದಿ ಮಾಡಿದೆ.