alex Certify ನಿಮ್ಮ ಅದೃಷ್ಟವನ್ನೇ ಬದಲಾಯಿಸಬಲ್ಲದು ಕರವಸ್ತ್ರ; ರಾಶಿಗಳಿಗನುಗುಣವಾಗಿ ಹೀಗಿರಲಿ ಕರ್ಚೀಫ್‌ ಬಣ್ಣ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಅದೃಷ್ಟವನ್ನೇ ಬದಲಾಯಿಸಬಲ್ಲದು ಕರವಸ್ತ್ರ; ರಾಶಿಗಳಿಗನುಗುಣವಾಗಿ ಹೀಗಿರಲಿ ಕರ್ಚೀಫ್‌ ಬಣ್ಣ…!

ನಾವು ಬಳಸುವ ಕರವಸ್ತ್ರ ನಮ್ಮ ಅದೃಷ್ಟವನ್ನು ಬದಲಾಯಿಸಬಲ್ಲದು. ಪ್ರತಿಯೊಬ್ಬರೂ ತಮ್ಮ ರಾಶಿಚಕ್ರ ಚಿಹ್ನೆಯ ಪ್ರಕಾರವೇ ಕರವಸ್ತ್ರದ ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಈ ಬಗ್ಗೆ ಜ್ಯೋತಿಷ್ಯ ಶಾಸ್ತ್ರದಲ್ಲೂ ಉಲ್ಲೇಖವಿದೆ.

ರಾಶಿಚಿಹ್ನೆಗೆ ಸೂಕ್ತವಾದ ಕರವಸ್ತ್ರವನ್ನು ಬಳಸಲು ಆರಂಭಿಸಿದರೆ ಸಮಸ್ಯೆಗಳೆಲ್ಲ ಪರಿಹಾರವಾಗಲು ಪ್ರಾರಂಭಿಸುತ್ತವೆ. ಇಲ್ಲಿಯವರೆಗೆ ವಿಫಲವಾದ ಸಂದರ್ಶನದಲ್ಲಿ ಯಶಸ್ಸು ಸಿಗುತ್ತದೆ.

ಮೇಷ, ವೃಷಭ ಮತ್ತು ಮಿಥುನ

ಮೇಷ ರಾಶಿಯ ಅಧಿಪತಿ ಮಂಗಳ. ಇದೇ ಕಾರಣಕ್ಕೆ ಕೆಂಪು, ಹಳದಿ, ಗುಲಾಬಿ, ಕೇಸರಿ ಬಣ್ಣದ ರುಮಾಲು ಇವರಿಗೆ ಶುಭಕರ. ಈ ಬಣ್ಣದ ಕರ್ಚೀಫ್‌ ಬಳಸಿದರೆ ಅವರು ಪ್ರತಿಯೊಂದು ಕೆಲಸದಲ್ಲೂ ಯಶಸ್ಸನ್ನು ಪಡೆಯುತ್ತಾರೆ.

ವೃಷಭ ರಾಶಿಯ ಅಧಿಪತಿ ಶುಕ್ರ. ಬಿಳಿ, ಹಸಿರು ಮತ್ತು ಬೆಳ್ಳಿಯ ಬಣ್ಣದ ಕರವಸ್ತ್ರಗಳು ಅವರಿಗೆ ಮಂಗಳಕರವಾಗಿರುತ್ತದೆ. ಈ ಬಣ್ಣವು ಅವರಿಗೆ ಒಳ್ಳೆಯ ಸುದ್ದಿಯನ್ನು ತರಲು ಸಹಾಯ ಮಾಡುತ್ತದೆ.

ಮಿಥುನ ರಾಶಿಯ ಅಧಿಪತಿ ಬುಧ. ಆದ್ದರಿಂದ ಹಸಿರು, ನೀಲಿ, ನೇರಳೆ ಅಥವಾ ಸಮುದ್ರ ಹಸಿರು ಬಣ್ಣದ ಕರವಸ್ತ್ರವು ಅವರಿಗೆ ಮಂಗಳಕರವಾಗಿರುತ್ತದೆ. ಈ ಬಣ್ಣಗಳನ್ನು ಬಳಸುವುದರಿಂದ  ಆತ್ಮವಿಶ್ವಾಸ ಹೆಚ್ಚುತ್ತದೆ.

ಕರ್ಕಾಟಕ, ಸಿಂಹ ಮತ್ತು ಕನ್ಯಾರಾಶಿ

ಚಂದ್ರನು ಕರ್ಕ ರಾಶಿಯ ಅಧಿಪತಿ. ಆದ್ದರಿಂದ ಅವರು ಬಿಳಿ, ಗುಲಾಬಿ, ಕೆನೆ ಅಥವಾ ಕೇಸರಿ ಬಣ್ಣದ ಕರವಸ್ತ್ರವನ್ನು ಇಟ್ಟುಕೊಳ್ಳಬೇಕು. ಹೀಗೆ ಮಾಡುವುದರಿಂದ ಸಮಾಜದಲ್ಲಿ ವ್ಯಕ್ತಿಯ ಗೌರವ ಮತ್ತಷ್ಟು ಹೆಚ್ಚುತ್ತದೆ.

ಸಿಂಹ ರಾಶಿಯ ಅಧಿಪತಿ ಸೂರ್ಯ. ಈ ರಾಶಿಯವರು ಕೆಂಪು, ಕೇಸರಿ, ಗುಲಾಬಿ, ಹಳದಿ ಮತ್ತು ಬಿಳಿ ಬಣ್ಣದ ಕರವಸ್ತ್ರವನ್ನು ಇಟ್ಟುಕೊಳ್ಳುವುದು ಸೂಕ್ತ. ಹೀಗೆ ಮಾಡುವುದರಿಂದ ಮನಸ್ಸಿನಲ್ಲಿ ಸಕಾರಾತ್ಮಕತೆ ಮತ್ತಷ್ಟು ಹೆಚ್ಚುತ್ತದೆ.

ಕನ್ಯಾರಾಶಿಯವರು ಹಸಿರು, ನೀಲಿ, ನೇರಳೆ ಮತ್ತು ಹಳದಿ ಬಣ್ಣದ ರುಮಾಲುಗಳನ್ನು ಬಳಸಬೇಕು. ಇದು ಅವರ ಬುದ್ಧಿವಂತಿಕೆಯನ್ನು ತೀಕ್ಷ್ಣಗೊಳಿಸುತ್ತದೆ.

ತುಲಾ, ವೃಶ್ಚಿಕ, ಧನು ರಾಶಿ

ತುಲಾ ರಾಶಿಯವರು ಬಿಳಿ ಮತ್ತು ಗುಲಾಬಿ ಬಣ್ಣದ ಕರವಸ್ತ್ರವನ್ನು ಇಟ್ಟುಕೊಂಡರೆ ಅದು ಮಂಗಳಕರವಾಗಿರುತ್ತದೆ. ಹೀಗೆ ಮಾಡುವುದರಿಂದ ವೃತ್ತಿಯಲ್ಲಿ ಪ್ರಗತಿಯನ್ನು ಪಡೆಯುವುದು ಮಾತ್ರವಲ್ಲದೆ ಆರ್ಥಿಕ ಲಾಭವೂ ಆಗುತ್ತದೆ.

ವೃಶ್ಚಿಕ ರಾಶಿಯವರು ಕೆಂಪು, ಗುಲಾಬಿ, ಬಿಳಿ ಮತ್ತು ಕೇಸರಿ ಬಣ್ಣದ ಕರವಸ್ತ್ರವನ್ನು ಬಳಸಬೇಕು, ಅದು ಮಂಗಳಕರವಾಗಿರುತ್ತದೆ.

ಇನ್ನು ಧನು ರಾಶಿಯವರು ಹಳದಿ, ಕೆಂಪು, ಗುಲಾಬಿ ಮತ್ತು ಕೇಸರಿ ಬಣ್ಣದ ಕರವಸ್ತ್ರವನ್ನು ಇಟ್ಟುಕೊಳ್ಳುವುದು ಮಂಗಳಕರವಾಗಿರುತ್ತದೆ. ಹೀಗೆ ಮಾಡುವುದರಿಂದ ಪ್ರತಿಯೊಂದು ಕಾರ್ಯದಲ್ಲೂ ಯಶಸ್ಸು ಸಿಗುತ್ತದೆ.

ಮಕರ, ಕುಂಭ ಮತ್ತು ಮೀನ

ಮಕರ ರಾಶಿಯವರು ನೀಲಿ, ಕಪ್ಪು ಮತ್ತು ನೇರಳೆ ಬಣ್ಣದ ಕರವಸ್ತ್ರವನ್ನು ಇಟ್ಟುಕೊಳ್ಳುವುದು ಶುಭಕರವಾಗಿರುತ್ತದೆ. ಇದು ವೃತ್ತಿಜೀವನವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಕುಂಭ ರಾಶಿಯವರು ಹಸಿರು, ನೀಲಿ ಮತ್ತು ಕಪ್ಪು ಬಣ್ಣದ ಕರವಸ್ತ್ರವನ್ನು ಇಟ್ಟುಕೊಳ್ಳುವುದು ಶುಭಕರ.

ಮೀನ ರಾಶಿಯವರು ಹಳದಿ, ಕೇಸರಿ, ಕೆಂಪು ಮತ್ತು ಬಿಳಿ  ಕರವಸ್ತ್ರವನ್ನು ಬಳಸಬೇಕು. ಇದು ಅವರ ಆತ್ಮವಿಶ್ವಾಸ ಮತ್ತು ಧನಾತ್ಮಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...