ಚಲನಚಿತ್ರ ಒಂದರಲ್ಲಿ ಮರುಸೃಷ್ಟಿಸಬಹುದಾದಂತಹ ಘಟನೆಯೊಂದು ಬ್ರೆಜಿಲ್ ನಲ್ಲಿ ನಡೆದಿದೆ. ವೇಗವಾಗಿ ಚಲಿಸುತ್ತಿದ್ದ ಪೊಲೀಸ್ ಕಾರಿನಿಂದ ಕೈದಿಯೊಬ್ಬ ಎಸ್ಕೇಪ್ ಆಗಿರುವ ಘಟನೆಯ ವಿಡಿಯೋ ವೈರಲ್ ಆಗುತ್ತಿದೆ. ಆ ವ್ಯಕ್ತಿ ಕೈಗೆ ಕೋಳ ಹಾಕಲಾಗಿತ್ತು ಎಂಬುದನ್ನ ಇಲ್ಲಿ ಗಮನಿಸಲೇಬೇಕು. ಕೋಳ ಹಾಕಿದ್ದರೂ, ವೇಗವಾಗಿ ಚಲಿಸುತ್ತಿದ್ದ ಗಾಡಿಯಿಂದ ಕೈದಿ ಪೊಲೀಸರ ಕಣ್ಗಾವಲಿನಡಿಯಲ್ಲೆ ಸಲೀಸಾಗಿ ಎಸ್ಕೇಪ್ ಆಗಿದ್ದಾನೆ.
ಈ ವಿಡಿಯೊವನ್ನು ಯೂಟ್ಯೂಬ್‌ನಲ್ಲಿ ವೈರಲ್ ಹಾಗ್ ಎನ್ನುವ ಚಾನೆಲ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಘಟನೆಯು ಡಿಸೆಂಬರ್ 28, 2021 ರಂದು ಬ್ರೆಜಿಲ್‌ನ ಪರೈಬಾದ ಅಲಗೋವಾ ನೋವಾದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಆನ್‌ಲೈನ್‌ನಲ್ಲಿ ಹಂಚಿಕೊಂಡಾಗಿನಿಂದ ವಿಡಿಯೋ 1.80 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ವಿಡಿಯೋ ನೋಡಿರುವ ವೀಕ್ಷಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಇದು ಹೇಗೆ ಸಂಭವಿಸಿದೆ ಎಂದು ಅಪನಂಬಿಕೆಗೆ ಒಳಗಾಗಿದ್ದಾರೆ. ಸ್ಥಳೀಯ ವರದಿಗಳ ಪ್ರಕಾರ, ವ್ಯಕ್ತಿ ಪೊಲೀಸ್ ಕಾರಿನ ಚೆಸ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾಗಿದ್ದಾನೆ, ನಂತರ ಪರಾರಿಯಾಗಿದ್ದಾನೆ. ಚಲಿಸುತ್ತಿದ್ದ ಕಾರಿನಿಂದ ಜಿಗಿದ ನಂತರ ರಸ್ತೆಯ ಮಧ್ಯದಲ್ಲೆ ಬಾತುಕೋಳಿಯಂತೆ ಬಾಗಿ, ಸಾಧ್ಯವಾದಷ್ಟು ವೇಗವಾಗಿ ಓಡಿದ್ದಾನೆ. ಈ ಕಾರಣದಿಂದ ಹಿಂಬದಿಯ ಕನ್ನಡಿಯಲ್ಲಿ ಆತ ಪರಾರಿಯಾಗಿರುವುದು ಪೊಲೀಸರಿಗೆ ಕಾಣಿಸಿಲ್ಲ, ಅಷ್ಟಕ್ಕೂ ಈ ಘಟನೆ ಅವರ ಗಮನಕ್ಕೆ ಬಂದಿಲ್ಲ, ಕೈದಿಯಿಲ್ಲದೆ ಕಾರು ಮುಂದೆ ಸಾಗಿದೆ. ಪೊಲೀಸ್ ಠಾಣೆಗೆ ಬಂದ ನಂತರವೇ ವ್ಯಕ್ತಿ ಪರಾರಿಯಾಗುವುದನ್ನು ಪೊಲೀಸರು ಗಮನಿಸಿರುವುದು.